ತಮಿಳು ಕಾರ್ಮಿಕರ ಹಲವು ಸಮಸ್ಯೆಗಳನ್ನು ಈಗಿನ ಸರಕಾರ ಪರಿಹರಿಸುವ ವಿಶ್ವಾಸವಿದೆ: ಚಂದ್ರಲಿಂಗಂ

ತಮಿಳು ಕಾರ್ಮಿಕರ ಹಲವು ಸಮಸ್ಯೆಗಳನ್ನು ಈಗಿನ ಸರಕಾರ ಪರಿಹರಿಸುವ ವಿಶ್ವಾಸವಿದೆ: ಚಂದ್ರಲಿಂಗಂ

ಜಿಲ್ಲೆಯಲ್ಲಿ ತಮಿಳು ಕಾರ್ಮಿಕರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ , ಸರಕಾರದಿಂದ ದೊರೆಯುವ ಸೌಲಭ್ಯಗಳು ತಮಿಳು ಕಾರ್ಮಿಕರಿಗೆ ದೊರೆಯುತ್ತಿಲ್ಲ, ರಬ್ಬರ್ ವಿಭಾಗಗಳ ನೆಡುತೋಪು ಮತ್ತು ಕರ್ಖಾನೆಗಳಲ್ಲಿ ದುಡಿಯುವ  ಕಾರ್ಮಿಕರು ವಾಸ ಮಾಡುವ ಮನೆಗಳ ಅಡಿಸ್ಥಳದ ಹಕ್ಕು ಕಾರ್ಮಿಕರಿಗೆ ದೊರೆಯುವಂತಾಗಬೇಕು,ಕಾರ್ಮಿಕರು ನಿವೃತಿಯಾದ ಬಳಿಕ ಮನೆಖಾಲಿಮಾಡಿ ಎನ್ನುವುದನ್ನು ತಮಿಳು ಕಾರ್ಮಿಕರು ಒಪ್ಪುವುದಿಲ್ಲ, ಬದಲಾಗಿ ಕಾರ್ಮಿಕರು ನಿವೃತ್ತಿಯಾದಾಗ ಅವರ ಮನೆಯವರಿಗೆ ಮತ್ತೆ ಕೆಲಸ ನೀಡುವಂತಾಗಬೇಕು ಎಂದು ಸರಕಾರವನ್ನು ಈ ಮೂಲಕ ಒತ್ತಾಯಿಸುವುದಾಗಿ  ತೋಟ ತೊಲಿಳಾಲರ್ ಸಂಘದ ಅಧ್ಯಕ್ಷ ಚಂದ್ರಲಿಂಗಂ ಹೇಳಿದ್ದಾರೆ .

ಅವರು ಸುಳ್ಯ  ಪ್ರೆಸ್ ಕ್ಲಬ್ ನಲ್ಲಿಸುದ್ದಿಗೊಸ್ಟಿ ನಡೆಸಿ ಮಾತನಾಡಿ , ರಾಜ್ಯದಲ್ಲಿ ಅಧಿಕಾರದಲ್ಲಿರುವ ಈಗಿನ ಕಾಂಗ್ರೇಸ್ ಸರಕಾರ, ತಮಿಳು ಕಾರ್ಮಿಕರ  ಸಹಾಯಕ್ಕೆ ಬರಲಿದೆ ಎನ್ನುವ ವಿಶ್ವಾಸವಿದೆ, ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರನ್ನು  ಬೇಟಿಯಾಗಿ 2021-22 ರ ಮತ್ತು 2022-23 ರ ಸಾಲಿನ ಕಾರ್ಮಿಕರಿಗೆ ದೊರೆಯುವ ಭೋನಸ್ ಗಳನ್ನು ಶೇ 20 ರಷ್ಟು ನೀಡುವಂತೆ ಮನವಿ ಮಾಡಲಾಗಿದ್ದು ,ಉತ್ತಮ ಸ್ಫಂದನೆ ದೊರೆತಿದೆ, ಹಿಂದೆ ಕಾಂಗ್ರೇಸ್ ಸರಕಾರ ತಮಿಳರಿಗೆ ಜಾತಿ ಸರ್ಟಿಫಿಕೇಟ್ ನೀಡಿತ್ತು , ಆದರೆ ನಮ್ಮ ಕಾರ್ಮಿಕರ ಮಕ್ಕಳು ಸರಕಾರಿ ಉಧ್ಯೋಗ , ಅಥವಾ ಉನ್ನತ ವ್ಯಾಸಂಗಕ್ಕೆ ಸಿಂದುತ್ವ ಸರ್ಟಿಫಿಕೇಟ್ ಬೇಕಾಗುತ್ತದೆ, ಹಿಂದಿನ ಸರಕಾರದಲ್ಲಿ ಪ್ರಯತ್ನ ಪಡಲಾಗಿತ್ತು , ಆದರೆ ದೊರೆತಿರಲಿಲ್ಲ, ಈಗಿನ ಸರಕಾರ ಸಿಂದುತ್ವ ಸರ್ಟಿಫಿಕೇಟ್ ದೊರಕಿಸಿಕೊಟ್ಟು ಕಾರ್ಮಿಕರ ಸಹಾಯಕ್ಕೆ ಬರಬೇಕು , ಅಲ್ಲದೆ ಕಾರ್ಮಿಕರಾಗಿ  10-15 ವರ್ಷಗಳಿಂದ ದುಡಿಯುತ್ತಿರುವ ಹಲವಾರು ಕಾರ್ಮಿಕರ ಕೆಲಸ ಖಾಯಂ ಆಗದೆ ಸರಕಾರಿ ಸವಲತ್ತುಗಳಿಂದ ವಂಚನೆಗೆ ಒಳಗಾಗುತ್ತಿದ್ದಾರೆ, ಇಂತಹ ನೌಕರರನ್ನು ಶೀಘ್ರವಾಗಿ ಸರಕಾರ ಖಾಯಂ ನೌಕರರಾಗಿ ಆದೇಶ ಹೊರಡಿಸುವ ಮೂಲಕ ಕಾರ್ಮಿಕರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ, ಕಾರ್ಮಿಕ ಮುಖಂಡರಾದ ಎಂ ಎಸ್ ಕುಮಾರ್, ಗಣೇಶ್, ನ.ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಸಿದ್ದಿಕ್ಕ್ ಕೊಕ್ಕೊ ,  ಶಹೀದ್ ಪಾರೆ ಮೊದಲಾದವರಿದ್ದರು.

ರಾಜ್ಯ