ಸುಳ್ಯ ನಗರದ ಶ್ರೀರಾಂಪೇಟೆಯಲ್ಲಿ ಕುಸಿದು ಬಿದ್ದು ವೃದ್ದ : ಆಸ್ಪತ್ರಗೆ ಸಾಗಿಸಿದ ಸ್ಥಳೀಯರು: ಕ್ಷಣಕಾಲ ಟ್ರಾಫಿಕ್ ಜಾಮ್.

ಸುಳ್ಯ ನಗರದ ಶ್ರೀರಾಂಪೇಟೆಯಲ್ಲಿ ಕುಸಿದು ಬಿದ್ದು ವೃದ್ದ : ಆಸ್ಪತ್ರಗೆ ಸಾಗಿಸಿದ ಸ್ಥಳೀಯರು: ಕ್ಷಣಕಾಲ ಟ್ರಾಫಿಕ್ ಜಾಮ್.

ಸುಳ್ಯ ನಗರದ ಶ್ರೀರಾಂಪೇಟೆಯಲ್ಲಿ ಜೂನಿಯರ್ ಕಾಲೇಜ್ ತಿರುವುರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ವೃದ್ದ ವ್ಯಕ್ತಿಯೋರ್ವರು ಕುಸಿದು ಬಿದ್ದು ಗಾಯ ಗೊಂಡ ಘಟನೆ ಇಂದು ಮದ್ಯಾಹ್ನ ನಡೆದಿದೆ
ಬಿದ್ದು ಗಾಯಗೊಂಡ ವೃದ್ದ ವ್ಯಕ್ತಿ ಸುಳ್ಯ ಅಜ್ಜಾವರ ಗ್ರಾಮದ ದಿವಾಕರ ಆಚಾರ್ಯ ಎಂದು ಗುರುತಿಸಲಾಗಿದೆ. ರಸ್ತೆ ದಾಟುವ ಸಮಯ ತಲೆ ತಿರುಗಿ ಬಿದ್ದಿರುವುದಾಗಿ ಹೇಳಲಾಗಿದೆ.ಘಟನೆ ರಸ್ತೆಯ ಮಧ್ಯ ಭಾಗದಲ್ಲಿ ಆದ ಕಾರಣ ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆಯಾಯಿತು.


ಗಾಯ ಗೊಂಡ ವ್ಯಕ್ತಿಯನ್ನು ಇದೇ ರಸ್ತೆಯಲ್ಲಿ ಬರುತ್ತಿದ್ದ ಸುಳ್ಯ ಲ್ಯಾಪ್ ಶಾಪ್ ಮಾಲಕ ಉವೈಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಅಬ್ದುಲ್ ಗಫೂರ್ ರವರು ಆಟೋ ರಿಕ್ಷಾದಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸೇವೆಯನ್ನು ಮೆರೆದಿದ್ದಾರೆ.

ರಾಜ್ಯ