

ಬಿಜೆಪಿ ಬರೀ ಘೋಷಣೆಯಲ್ಲಿಯೇ ಕಾಲ ಕಳೆಯುತ್ತಿದೆ,ಸಂವಿದಾನ ಬುಡಮೇಲು ಮಾಡಿ, ಜನತೆಗೆ ಯಾವುದೇ ಯೋಜನೆ ಸಿಗದಂತೆ ಮಾಡುತ್ತಿರುವ ಬಿ ಜೆ ಪಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ,ನೋಟು ಅಮಾನ್ಯಕರಣ,ಕಪ್ಪು ಹಣ ತರುವ ಸುಳ್ಳು ಭರವಸೆಗಳನ್ನು ನೀಡಿ, ಇಂದು 40% ಕಮಿಷನ್ ಪಡೆಯುವ ಭ್ರಷ್ಟವಾದ ಸರಕಾರವಾಗಿದೆ, ಗ್ರಾಮ ಪಂಚಾಯತ್ ನಿಂದ ಹಿಡಿದು ರಾಜ್ಯದವರೆಗೆ ಕಮಿಷನ್ ಪಡೆದು ಕೇಂದ್ರಕ್ಕೆ ತಲುಪಿಸುತ್ತಿದ್ದಾರೆ,ಹಿಂದೂ ಹಸರಲ್ಲಿ ಮತ ಪಡೆದು, ಸ್ವಾಮೀಜಿಗಳ ಮಠಕ್ಕೆ ನೀಡಿದ ಅನುದಾನದಲ್ಲೂ ಕಮಿಷನ್ ಕೇಳುವ ಈ ಸರಕಾರದಿಂದ ಯಾವ ಅಭಿವೃದ್ದಿ ನಿರೀಕ್ಷೆ ಮಾಡಬಹುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ.ಅವರು ಕಾಂಗ್ರೇಸ್ ಪಕ್ಷ ಕರಾವಳಿಯಾಧ್ಯಂತ ಹಮ್ಮಿಕೊಂಡಿರುವ ಪ್ರಜಾಧ್ವನಿಯಾತ್ರೆಯ ಅಂಗವಾಗಿ ಸುಳ್ಯದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮುಂದಿನ ಅವಧಿಯಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದು ಮೀನುಗಾರಿಕೆ ಉದ್ಯೋಗ ಮಾಡುತ್ತಿರುವ ಮಹಿಳೆಯರಿಗೆ ಒಂದು ಲಕ್ಷ ಬಡ್ಡಿ ರಹಿತ ಸಾಲ,ಡಿಸೆಲ್ ಪೆಟ್ರೋಲ್ ಗಳಿಗೆ ಸಬ್ಸಿಡಿ ನೀಡಲಾಗುವುದು, ಗ್ರಾಮ ಗ್ರಾಮದಲ್ಲಿ ವಿವೇಕಾನಂದ ಸೆಂಟರ್ ಸ್ಥಾಪಿಸಿ ಸೌಹಾರ್ಧತೆಯನ್ನು ಉದ್ಧೀಪನ ಮಾಡುವ ಕೆಲಸ ಮಾಡುತ್ತೇವೆ , ಬಡವರ , ರೈತರ ಪರ ಹಲವು ಯೋಜನೆ ತರುವ ಮೂಲಕ ಮಾದರಿ ಸರಕಾರನಡೆಸುತ್ತೇವೆ ಹೀಗಾಗಲು ಸುಳ್ಳೇ ಮನೆ ದೇವರು ಮಾಡಿಕೊಂಡಿರುವ ಪಕ್ಷವನ್ನು ಸೋಲಿಸಿ, ಶಾಂತಿ ನೆಮ್ಮದಿಯ ಜೀವನಕ್ಕೆ, ಮಕ್ಕಳ ಉಜ್ವಲ ಭವಿಷ್ಯಕ್ಕೆ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ ಎಂದು ನೆರೆದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು,



ಕರಾವಳಿಯಾಧ್ಯಂತ ಪ್ರಜಾ ಧ್ವನಿ ಯಾತ್ರೆ ಹಮ್ಮಿ ಕೊಂಡಿರುವ ಕಾಂಗ್ರೇಸ್ ಪಕ್ಷದ ಸಭೆಗಳು ನೆಲ್ಯಾಡಿಯಲ್ಲಿ ಉದ್ಘಾಟನೆಗೊಂಡು, ಬೆಳ್ಳಾರೆ ಮತ್ತು ಗುತ್ತಿಗಾರಿನಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿ ಸಂಜೆ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯಿತು, ಬೃಹತ್ ಸಂಖೆಯಲ್ಲಿ ನೆರೆದ ಕಾರ್ಯಕರ್ತರನ್ನು ಉದ್ದೇಶಿಸಿ ವಿಧನಾ ಪರಿಷತ್ ಸದಸ್ಯ ಮಂಜುನಾಥ್ ಬಂಡಾರಿ ಹಿಂದೆ ಅಪಪ್ರಚಾರದಿಂದ ಪಕ್ಷಕ್ಕೆ ಸೋಲಾಗಿತ್ತು, ಈ ಬಾರಿ ಅಪಪ್ರಚಾರ ಹತ್ತಿಕ್ಕುವ ಕೆಲಸವನ್ನು ಕಾರ್ಯಕರ್ತರು ಮಾಡಿಲಿದ್ದಾರೆ, ಪ್ರತೀ ಮನೆಗಳಿಗೂ ಕಾರ್ಯಕರ್ತರು ಸತ್ಯವನ್ನು ತಿಳಿಸಲಿದ್ದಾರೆ, ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರಬೇಕಾದಲ್ಲಿ ಸುಳ್ಯದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೆಲ್ಲಬೇಕಿದೆ,ಇದಕ್ಕೆ ಪಣ ತೊಡಗಬೇಕು ಎಂದರು,

ಕಾಂಗ್ರೇಸ್ ದ.ಕ ಉಸ್ತುವಾರಿ ಸಲೀ ಅಹಮ್ಮದ್ ಮಾತನಾಡಿ ಜನ ಬದಲಾವಣೆ ಬಯಸಿದ್ದಾರೆ, ಈ ಬಾರಿ ಕಾಂಗ್ರೇಸ್ ಖಚಿತ ಅಧಿಕಾರಕ್ಕೆಬರುತ್ತದೆ,ಹಾಗೆಂದು ಕಾಂಗ್ರೇಸ್ ಅಧಿಕಾರಕ್ಕೆಂದು ಹುಟ್ಟಿದ ಪಕ್ಷವಲ್ಲ,ಈ ದೇಶಕ್ಕೆ ಕಾಂಗ್ರೇಸ್ ತ್ಯಾಗ ಅಪಾರ,ಬಿಜೆಪಿ ರಾಮ ರಾಜ್ಯದ ಕನಸು ತೋರಿಸಿ, ಗ್ಯಾಸ್ , ಪೆಟ್ರೋಲ್ , ಇನ್ನಿತರ ವಸ್ತುಗಳ ಬೆಲೆ ಏರಿಸಿ ,ಕಮಿಷನ್ ಬ್ರಷ್ಟಾಚಾರದಿಂದ ರಾವಣ ರಾಜ್ಯ ಮಾಡಹೊರಟಿದೆ ಎಂದರು.

ಕಾಂಗ್ರಸ್ ಹಿಂದುಳಿದ ವರ್ಗದ ರಾಜ್ಯ ಅದ್ಯಕ್ಷ ಮದು ಬಂಗಾರಪ್ಪ ಮಾತನಾಡಿ ಕರವಾಳಿಗೆ ಪ್ರತ್ಯೇಕ ಪ್ರಣಾಳಿಕೆ ಸಿದ್ದಪಡಿಸಿದ್ದೇವೆ ಅಡಿಕೆ ಬೆಳೆಗಾರರ ಹಿತ ಕಾಪಾಡಲು ಪಕ್ಷ ಎಲ್ಲಾ ರೀತಿಯಲ್ಲೂ ಸಿದ್ದವಾಗಿದೆ, ಇಂದು ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆಯೂ ಕಾಂಗ್ರೇಸ್ ಕೊಡುಗೆಯೇ ಆಗಿದೆ, ಈ ರಾಜ್ಯಕ್ಕೆ ಕರವಾಳಿ ಭಾಗದಿಂದಲೇ ಬದಲಾವಣೆಯ ಮೂಲಕ ಒಳ್ಳೆಯ ವಾತಾವರಣ ನಿರ್ಮಾಣವಾಗಬೇಕಾಗಿದೆ ಎಂದರು.

ಸಭೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್,
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ವಂಗಾಯ, ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ,ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಕೆಪಿಸಿಸಿ ಸಂಯೋಜಕರಾದ ಎಚ್.ಎಂ.ನಂದಕುಮಾರ್, ಅ.ಕೃಷ್ಣಪ್ಪ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ, ಮುಖಂಡರಾದ ಡಾ.ಜಿ.ರಘು, ಮಾಜಿ ಮೇಯರ್ ಕ
ವಿತಾ ಸನಿಲ್, ಶಾಹುಲ್ ಹಮೀದ್, ಎಸ್.ಸಂಶುದ್ದೀನ್, ಎಂ. ಎಸ್.ಮಹಮ್ಮದ್, ಗೀತಾ ಕೋಲ್ದಾರ್, ಲುಕ್ಯಾನ್ ಬಂಟ್ವಾಳ್, ಅಪ್ಪಿ ಮಂಗಳೂರು, ಎನ್. ಜಯಪ್ರಕಾಶ್ ರೈ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂ. ವೆಂಕಪ್ಪ ಗೌಡ ಸ್ವಾಗತಿಸಿ, ಪಿ.ಎಸ್. ಗಂಗಾಧರ್ ವಂದಿಸಿದರು. ಶಶಿಧರ್ ಎಂ.ಜೆ. ಕಾರ್ಯಕ್ರಮ ನಿರೂಪಿಸಿದರು.

