ನ.17 ಮತ್ತು18 ರಂದು ಸುಳ್ಯದಲ್ಲಿ ಪ್ರೋ ಕಬಡ್ಡಿ ಮಾದರಿಯಲ್ಲೇ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಉತ್ಸವ-ರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳಿಂದ ಲೀಗ್ ಪಂದ್ಯಾಟ

ನ.17 ಮತ್ತು18 ರಂದು ಸುಳ್ಯದಲ್ಲಿ ಪ್ರೋ ಕಬಡ್ಡಿ ಮಾದರಿಯಲ್ಲೇ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಉತ್ಸವ-ರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳಿಂದ ಲೀಗ್ ಪಂದ್ಯಾಟ


ಧ್ವನಿ ಬೆಳಕು ಮತ್ತು ಶಾಮಿಯಾನ ಮ್ಹಾಲಕರ ಸಂಘದಿಂದ ದಾಖಲೆಯ ರೀತಿಯಲ್ಲೆ ನಡೆದು ಬರಲಿದೆ ಕಬಡ್ಡಿ ಹಬ್ಬ..

ನ. 17 ಮತ್ತು 18 ರಂದು ಸುಳ್ಯ ಪ್ರಭು ಮೈದಾನದಲ್ಲಿ ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 8ನೇ ವಾರ್ಷಿಕೋತ್ಸವದ ಅಂಗವಾಗಿ ಅಮೆಚೂರು ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ಇದರ ಸಹಭಾಗಿತ್ವದಲ್ಲಿ ಸುಳ್ಯ ಕಬಡ್ಡಿ ಉತ್ಸವ ಭಾರೀ ಅದ್ಧೂರಿಯಾಗಿ ನಡೆಯಲಿದೆ, ಸುಳ್ಯದಲ್ಲಿ ವಿಶೇಷವಾಗಿ ರಾಷ್ಟ್ರೀಯ ಮಟ್ಟದ ಆಟಗಾರರ 8 ಆಹ್ವಾನಿತ ರಾಷ್ಟ್ರೀಯ ಮಟ್ಟದ ತಂಡಗಳಿಂದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್ ಸುಳ್ಯ ಮತ್ತು ಕಬಡ್ಡಿ ಪಂದ್ಯಾಕೂಟದ ಸಂಚಾಲಕ ಸಂಶುದ್ದೀನ್ ಜಿ ತಿಳಿಸಿದ್ದಾರೆ ಅವರು ಸುಳ್ಯದ ತಮ್ಮ ಕಚೇರಿಯಲ್ಲಿ ಸುದ್ದಿಗೋಸ್ಟಿ ನಡೆಸಿ ಮಾತನಾಡಿ ಈ ವಿವರ ತಿಳಿಸಿದರು.


ಕಳೆದ ವರ್ಷ ಯಶಸ್ವಿ ಪಂದ್ಯಾಟ ನಡೆಸಿರುತ್ತೇವೆ.ಈ ಕಾರ್ಯಕ್ರಮದ ಯಶಸ್ವಿಯ ಹಿನ್ನಲೆಯಲ್ಲಿ ಈ ಬಾರಿ ವಿಶೇಷವಾಗಿ ರಾಷ್ಟ್ರಮಟ್ಟದ ಆಟಗಾರರನ್ನು ಕರೆಸಿಕೊಂಡು ಪಂದ್ಯಾಟದ ಆಯೋಜನೆ ಮಾಡಲಾಗಿದೆ. ಕರ್ನಾಟಕ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಹಿಮಾಚಲ ಪ್ರದೇಶ ,ಹರಿಯಾಣ, ದೆಹಲಿ ರಾಜ್ಯಗಳ ಪ್ರತಿನಿಧಿಸುವ ಆಟಗಾರರು ಆಗಮಿಸಲಿದ್ದು,ಕ್ರೀಡಾ ಪ್ರೇಮಿಗಳಿಗೆ ರೋಮಾಂಚನ ಪಂದ್ಯಾಟ ವನ್ನು ಸವಿಯಲು ಸಂಪೂರ್ಣ ಆಧುನಿಕವಾಗಿ ಸುಮಾರು 5000 ಮಂದಿ ಕುಳಿತು ನೋಡಬಲ್ಲ ಗ್ಯಾಲರಿ ವ್ಯವಸ್ಥೆಯನ್ನು ಕ್ರೀಡಾಂಗಣದ 4 ಬದಿ ಹಾಗೂ ಇಂಡೋರ್ ಸ್ಟೇಡಿಯಂ ಮಾದರಿಯಲ್ಲಿ ಕ್ರೀಡಾಂಗಣವನ್ನು ಸಿದ್ದಪಡಿಸಲಾಗುವುದು. ಮಹಿಳೆಯರಿಗೆ ಪ್ರತ್ಯೇಕವಾಗಿ ಕುಳಿತುಕೊಂಡು ಪಂದ್ಯಾಟವನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.ಪಂದ್ಯಾಟ ನಡೆಸು ೨೫ ಲಕ್ಷಕ್ಕೂ ಅಧಿಕ ಖರ್ಚು ತಗಲುವುದರಿಂದ
ಪಂದ್ಯಾಟ ಸಹಾಯಾರ್ಥ ಲಕ್ಕಿಡಿಪ್ ಕೂಪನ್ ಆಯೋಜಿಸಲಾಗುವುದು.ಎಂದು ತಿಳಿಸಿದರು.

ವಿಜೇತ ತಂಡಗಳಿಗಿದೆ ಲಕ್ಷ ರೂ ಮೊತ್ತದ ಬಹುಮಾನ

ವಿಜೇತ ತಂಡಗಳಿಗೆ ಪ್ರಥಮ ಬಹುಮಾನ
1 ಲಕ್ಷ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 65,000 ಮತ್ತು ಟ್ರೋಫಿ, ತೃತೀಯ ಬಹುಮಾನ 35,000 ಮತ್ತು ಟ್ರೋಫಿ, ಚತುರ್ಥ ಬಹುಮಾನ 35,000 ಮತ್ತು ಟ್ರೋಫಿ ನೀಡಲಾಗುವುದು ಎಂದು ವಿವರ ನೀಡಿದರು.

ಸುಳ್ಯದ ಇತಿಹಾಸದಲ್ಲಿಯೇ ದಾಖಲೆಯ ರೀತಿಯಲ್ಲಿ ಪಂದ್ಯಾಕೂಟ ನಡೆಸಲು ಯೋಜನೆ.

ಸುಳ್ಯದ ಇತಿಹಾಸದಲ್ಲಿ ದಾಖಲೆಯ ರೀತಿಯಲ್ಲಿ ಪ್ರಥಮ ಬಾರಿಗೆ ಅದ್ದೂರಿ ಕಬಡ್ಡಿ ಉತ್ಸವ ನಡೆಸಬೇಕೆನ್ನುವುದು ನಮ್ಮ ಆಶಯವಾಗಿದ್ದು , ಕಾರ್ಯಕ್ರಮದ. ಯಶಸ್ವಿಗೆ ಕ್ರೀಡಾಫ್ರೇಮಿಗಳ ಸಹಕಾರವನ್ನು ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಶಾಫಿ ಪ್ರಗತಿಪೈಚಾರು,ಸಂಯೋಜಕ ಜಿ.ಜಿ ನಾಯಕ್ ಸುಳ್ಯ, ಕಾರ್ಯದರ್ಶಿ ಸತೀಶ್ ಕಲ್ಲುಗುಂಡಿ, ಗುರುದತ್ ನಾಯಕ್ ಹಾಗೂ ಸುಳ್ಯ ತಾಲೋಕು ಧ್ವನಿ ಬೆಳಕು ಮತ್ತು ಶಾಮಿಯಾನ ಮ್ಹಾಲಕರ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯ