


ಇತೀಹಾಸ ಪ್ರಸಿದ್ಧ ಶ್ರೀ ಚೆನ್ನಕೇಶವ ದೇವರ ರಥೋತ್ಸವಕ್ಕೆ ಸಾವಿರಾರು ಭಕ್ತಾಧಿಗಳು ಸಾಕ್ಷಿಯಾದರು ವರ್ಷಂಪ್ರತಿಯಂತೆ ಜನವರಿ 11 ಮದ್ಯರಾತ್ರಿ ಶ್ರೀ ಚೆನ್ನಕೇಶವ ದೇವರ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಈ ಭಾರೀಯೂ ಕಿಕ್ಕಿರಿದ ಸಂಖ್ಯೆಯಲ್ಲಿ ಭಕ್ತಗಡಣ ಸೇರಿತ್ತು, ಭಕ್ತರ ಗೋವಿಂದಾ ಹರಿ ಗೋವಿಂದ ನಾಮಸ್ಮರಣೆಯೋಂದಿಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಅಲಂಕೃತ ರಥದಲ್ಲಿ ಶ್ರೀ ಚೆನ್ನಕೇಶವ ದೇವರನ್ನು ಪೀಠಾರೋಹಣರನ್ನಾಗಿಸಿ ಸಕಲಪೂಜಾ ವಿಧಿವಿಧಾನಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥಯಾತ್ರೆ ರಥ ಭೀದಿಯಾಗಿ ಚೆನ್ನಕೇಶವ ದೇವರ ಕಟ್ಟೆಯವರೆಗೂ ಸಾಗಿಬಂದಿತು.ಈ ಸಂದರ್ಭದಲ್ಲಿ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ , ದೇವಸ್ಥಾನ ಆಡಳಿತ ಸಮಿತಿ ಹಾಗೂ ಜೀರ್ಣೋದ್ದಾರ ಸಮಿತಿಗಳ ಪದಾಧಿಕಾರಿಗಳು ಹಾಗೂ ಶ್ರೀ ದೇವರ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು.




