
ತೀವ್ರ ಕೂತೂಹಲ ಹುಟ್ಟು ಹಾಕಿರುವ ರಾಜಕೀಯ ಬೆಳವಣಿಗೆಯೊಂದರಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯ ಹೆಸರು ಬಹುತೇಕ ಅಂತಿಮಗೊಂಡಿದೆ ಎಂಬ ಮಾಹಿತಿ ಹರಿದಾಡುತ್ತಿದೆ,ಈ ಸುದ್ದಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ವುಂಟುಮಾಡಿವೆ, ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಮಹಿಳೆಯರಿಗೆ ಶೇ 10 ಅವಕಾಶ ನೀಡುವ ವಾಗ್ದಾನದ ಬೆನ್ನಲೆ ರಾಜ್ಯದಲ್ಲಿ ಬಿ ಜೆ ಪಿಯ ಗೆಲುವಿನ ಹೆಬ್ಬಾಗಿಲು ಎನಿಸಿರುವ ಕರಾವಳಿಯಲ್ಲಿ ಸತತ 6 ಬಾರಿ ಗೆಲುವಿನ ಕೇಕೆಯೊಂದಿಗೆ ಇಡೀ ದೇಶದಲ್ಲೆ ಬಿಜೆಪಿಗೆ ಕಳೆದ ಮೂರು ದಶಕಗಳಿಂದ ಶಾಶ್ವತ ಗೆಲುವು ತಂದುಕೊಟ್ಟ ಸುಳ್ಯ ಕ್ಷೇತ್ರ ಈ ಬಾರಿ ಬಹುತೇಕ ಮಹಿಳಾ ಪಾಲಾಗುವ ಎಲ್ಲಾ ಸೂಚನೆ ಲಭ್ಯವಾಗಿದೆ,



ಹೌದು, ಮೀಸಲಾತಿ ಕ್ಷೇತ್ರವಾದರೂ ರಾಜ್ಯಮಟ್ಟದಲ್ಲಿ ನಾಯಕರುಗಳೊಂದಿಗೆ ಗುರುತಿಸಿಕೊಂಡಿರುವ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಬಾಗೀರಥಿ ಮುರುಳ್ಯ ಹೆಸರು ಬಹುತೇಕ ಫೈನಲ್..? ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ. ಕರಾವಳಿಯ ಪ್ರಭಲ ಇತರ ಕ್ಷೇತ್ರಗಳನ್ನು ಪರಿಗಣಿಸಿದರೆ, ಸುಳ್ಯ ವಿದಾನ ಸಭಾ ಕ್ಷೇತ್ರ ಕಮಲ ಪಾಳಯಕ್ಕೆ ಸುಲಭದ ತುತ್ತು,ಹೇಗೂ ಇಲ್ಲಿ ಮಹಿಳೆಯನ್ನು ನಿಲ್ಲಿಸಿದರೆ ದಕ್ಷಿಣ ಕನ್ನಡದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದಂತೆಯೂ …ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರವನ್ನು ಗೆದ್ದಂತೆಯೂ ಎನ್ನುವ ಒಂದೇ ಏಟಿಗೆ ಎರಡು ಹಕ್ಕಿ ಎಂಬ ಆಲೋಚನೆ ಕಮಲ ಪಾಳಯದ್ದು, ಮತ್ತು ಈ ನಿಲುವಿಗೆ ಬಿ ಜೆ ಪಿ ರಾಜ್ಯ ನಾಯಕರೂ, ಕರಾವಳಿಯ ಸಂಘ ಪರಿವಾರದ ನಾಯಕರು ಬೆಂಬಲ ಸೂಚಿಸಿದೆ ಎನ್ನುವ ಗುಸು ಗುಸು ಸುದ್ದಿ ಹರಿದಾಡುತ್ತಿದೆ.ಹಾಗಾಗಿ ಭಾಗೀರಥಿ ಮುರಳ್ಯ ಸ್ಫರ್ಧಾಕಣದಲ್ಲಿ ಉಳಿಯುವುದು ಅಂತಿಮ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ. ಇಷ್ಟಾದರೂ ಪಕ್ಷದ ನಿಷ್ಟಾವಂತರೆನಿಸಿಕೊಳ್ಳವು ಸಚಿವ ಅಂಗಾರರನ್ನು ಮತ್ತೆ ಅಭ್ಯರ್ಥಿಯಾಗಿ ಪರಿಗಣಿಸಿ ಎಂದು ಒಂದು ಪಂಗಡ ಒತ್ತಡ ಹೇರುತ್ತಿದ್ದಾರೆ ಎಂದೂ…ಇತರ ಹೊಸ ಮುಖ ,ಯುವಕರಿಗೂ ಅವಕಾಶ ನೀಡಿ ಎಂದು ಒಂದಷ್ಟು ತೆರೆ ಮೆರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಸುಳ್ಯಬಿಜೆಪಿ ವಲಯದಲ್ಲಿ ಬಹುತೇಕ ಭಾಗಿರಥಿ ಯವರ ಮೇಲೆ ಒಲವು ವ್ಯಕ್ತವಾಗಿದೆ ಎನ್ನುವುದು ಆಂತರಿಕ ಸಮಿಕ್ಷೆ ತಿಳಿಸುತ್ತದೆ, ಇವರಿಗೆ ಕಟೀಲ್ ಸೇರಿದಂತೆ ಕರಾವಳಿಯ RSS ಮುಖಂಡರ ಬೆಂಬಲವೂ ಇದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ.ಈ ಮದ್ಯೆ ಹೊರತಾಲೋಕಿನ ಮಹಿಳೆಯೊಬ್ಬರ ಹೆಸರು ಸ್ಪರ್ಧಾ ಕಣದಲ್ಲಿದೆ..ಎನ್ನುವುದು ಗೌಪ್ಯವಾಗಿ ಉಳಿದಿಲ್ಲ, ಹಾಗಿದ್ದರೂ ಪಕ್ಷ ತನ್ನ ಅಧಿಕೃತ ಅಭ್ಯರ್ಥಿಯನ್ನು ಇನ್ನೂ ಗೋಷಣೆ ಮಾಡಿಲ್ಲ