
ಪ್ರತಿಯೊಬ್ಬರು, ಪ್ರತೀ ದಿನ ಯೋಗ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮಗೊಳ್ಳುವುದಲ್ಲದೆ, ನಮ್ಮ ಜ್ಞಾನಶಕ್ತಿ ವೃದ್ಧಿಸುತ್ತದೆ ಎಂದು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹೇಳಿದ್ದಾರೆ.



ಜೂ.21 ರಂದು ಕೆ.ವಿ.ಜಿ. ಆಯುರ್ವೇದ ಕಾಲೇಜಿನಲ್ಲಿ
ಯೋಗ ದಿನಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ
ಅವರು ಮಾತನಾಡಿದರು.ಯೋಗಾಭ್ಯಾಸ ದೇಹದ ಮೇಲೆ ಉತ್ತಮ ಪ್ರಭಾವ ಬೀರುತ್ತದೆ. ಹೃದಯಕ್ಕೆ ಮೂಳೆಗೆ, ಉಸಿರಾಟ ಮಾಡಲು ಉಪಯುಕ್ತವಾಗುವ ಜತೆಗೆ ದೇಹದ ಎಲ್ಲ ಸಮಸ್ಯೆಗಳು ದೂರವಾಗುವುದು. ಆದ್ದರಿಂದ ಪ್ರತಿಯೊಬ್ಬರು ಯೋಗವನ್ನು ಗುರುಗಳ ಮೂಲಕವೇ ಕಲಿಯಬೇಕು ಎಂದು ಹೇಳಿದರು.

ಅಕಾಡೆಮಿ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ,
ನಿರ್ದೇಶಕ ಜಗದೀಶ್ ಅಡ್ತಲೆ, ಕಾಲೇಜು ಪ್ರಾಂಶುಪಾಲ
ಡಾ.ಲೀಲಾಧರ್ ಡಿ.ವಿ. ಹಾಗೂ ಕಾಲೇಜಿನ ವಿಭಾಗ
ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ವರ್ಗ,
ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
