
ಸುಬ್ರಹ್ಮಣ್ಯ ಮನೆಯೊಂದಕ್ಕೆ ಕಳ್ಳರು ನುಗ್ಗಿ ಚಿನ್ನ, ಬೆಳ್ಳಿ, ನಗದು ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.30 ರ ರಾತ್ರಿ ತಡ ರಾತ್ರಿ ಬೆರಳಚ್ಚು ತಜ್ಞರು, ಶ್ವಾನದಳ ಆಗಮನವಾಗಿ ತನಿಖೆ ನಡೆಸಿದ್ದಾರೆ.



ಅರ್ಚಕ ಕೃಷ್ಣರಾಜ್ ಕುಟುಂಬ ಸಮೇತ ಉಡುಪಿಗೆ ತೆರಳಿದ್ದು ಹಿಂತಿರುಗಿ ಜು.30 ರಂದು ಸಂಜೆ ಸುಬ್ರಹ್ಮಣ್ಯಕ್ಕೆ ಮರಳಿದಾಗ ಮನೆಯಲ್ಲಿ ಕಳ್ಳತನ ಆಗಿರುವುದು ಗಮನಕ್ಕೆ ಬಂದಿತ್ತು ಈ ಬಗ್ಗೆ ಪೋಲಿಸ್ ದೂರು ನೀಡಲಾಗಿತ್ತು ,ಪೋಲಿಸರು ಕಳ್ಳತನ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಹೆಂಚು ತೆಗೆದು ಒಳ ನುಸುಳಿದ್ದ ಕಳ್ಳರು
ಮನೆಯ ಹಿಂಬದಿಯ ಮಾಡಿನ ಹೆಂಚು ತೆಗೆದು ಮನೆಯೊಳಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಕವಾಡು ಒಡೆದು ನಗ ನಗದಿಗಾಗಿ ತಡಕಾಡಿದ್ದರೆ, ಬಟ್ಟೆಗಳನ್ನು ಎಳೆದು ಹಾಕಿದ್ದಾರೆ. ಈ ಸಂದರ್ಭ ಒಂದು ಚೈನ್, ಒಂದು ಬೆಂಡೋಲೆ, ಬೆಳ್ಳಿಯ ಕೆಲ ಆಭರಣ, ಒಂದು ಲಕ್ಷದಷ್ಟಿದ್ದ ನಗದು ಕಳ್ಳತನ ಆಗಿರುವುದಾಗಿ ತಿಳಿದು ಬಂದಿದೆ. ಕಳ್ಳತನ ನಡೆಸಿದ ಬಳಿಕ ಹಿಂಬದಿ ಬಾಗಿಲಿನ ಮೂಲಕ ಕಳ್ಳರು ತೆರಳಿದ್ದಾರೆ ಎನ್ನಲಾಗಿದೆ.ರಾತ್ರಿಯೇ ಮಂಗಳೂರಿನಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಸುಬ್ರಹ್ಮಣ್ಯ ಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಕೃಷ್ಣರಾಜ್ ಅವರು ನೀಡಿರುವ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಸಿ.ಸಿ ಕ್ಯಾಮರಾ ಮತ್ತಿತರ ಮೂಲಗಳನ್ನು ಜಾಲಾಡುತಿದ್ದಾರೆ ಎಂದು ತಿಳಿದು ಬಂದಿದೆ.