
ಸುಬ್ರಹ್ಮಣ್ಯ: ಇತ್ತೀಚೆಗೆ ಕಾರು ಅಪಘಾತದಲ್ಲಿ ಗಾಯಗೊಂಡ ಎಸ್ ಎಸ್ ಪಿ ಯು ಕಾಲೇಜಿನ ವಿದ್ಯಾರ್ಥಿನಿಯರಾದ ಹನಿಷ್ಕಾ, ಬಿಂಬಿಕಾ ಮತ್ತು ಸಿಂಚನಾ ವಿ.ಪಿ ಅವರ ಚಿಕಿತ್ಸೆಗೆ ಸಹಕಾರಿಯಾಗಲು ಸುಬ್ರಹ್ಮಣ್ಯದ ಅಶ್ವಮೇಧ ಪ್ರೆಂಡ್ಸ್ ಅವರು ಸೋಮವಾರ ಧನ ಸಹಾಯ ಹಸ್ತಾಂತರಿಸಿದರು.ಅಶ್ವಮೇಧದ ಸದಸ್ಯರಾದ ಸುಬ್ರಹ್ಮಣ್ಯ ಮಣಿಯಾಣಿ ಕುಲ್ಕುಂದ, ವಿಶ್ವಾಸ್ ಕುಲ್ಕುಂದ, ಪ್ರದೀಪ್ ಷಷ್ಠಿ ಅವರು ವಿದ್ಯಾರ್ಥಿನಿಯರ ಪೋಷಕರಾದ ರೋಹಿತಾಕ್ಷ ಗುತ್ತಿಗಾರು,ಯುವರಾಜ್ ಅಡ್ಡನಪಾರೆ ಮತ್ತು ಸಿಂಚನಾ ಅವರ ಪೋಷಕರಿಗೆ ಸಹಾಯಧನ ಹಸ್ತಾಂತರಿಸಿದರು.



ಎಸ್‌ಎಸ್‌ಪಿಯು ಕಾಲೇಜಿನಲ್ಲಿ ನಡೆದ ಸಹಾಯಧನ ವಿತರಣಾ ಸಮಯದಲ್ಲಿ ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್, ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು, ಅಶ್ವಮೇಧ ಪ್ರೆಂಡ್ಸ್ನ ಭಾನುಪ್ರಕಾಶ್, ಪದ್ಮನಾಭ, ದಿನೇಶ್ ಎಸ್.ಎನ್, ನಿತಿನ್ ಭಟ್,ಪ್ರದೀಪ್ ಷಷ್ಠಿ, ಸುಬ್ರಹ್ಮಣ್ಯ ಮಣಿಯಾಣಿ ಕುಲ್ಕುಂದ ಮನೋಜ್ ಕೈಕಂಬ,ವಿಶ್ವಾಸ್ ಕುಲ್ಕುಂದ, ಉಪನ್ಯಾಸಕರಾದ ಜಯಪ್ರಕಾಶ್.ಆರ್, ರತ್ನಾಕರ.ಎಸ್ ಉಪಸ್ಥಿತರಿದ್ದರು.
ಅಶ್ವಮೆಧ ಪ್ರೆಂಡ್ಸ್ ಕ್ರಿಕೇಟ್ ಪಂದ್ಯಾಟ ಆಯೋಜನೆ ಮಾಡಿ ಅದರಲ್ಲಿ ಉಳಿಕೆಯಾದ ಮೊತ್ತವನ್ನು ಇತರರಿಗೆ ಹಸ್ತಾಂತರ ಮಾಡಿ ಸಹಕಾರ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ.ಕಳೆದ ಮೂರು ವರ್ಷಗಳಿಂದ ಈ ಸೇವಾ ಕೈಂಕರ್ಯವನ್ನು ಅಶ್ವಮೇಧ ಗೆಳೆಯರು ನಡೆಸುತ್ತಿದ್ದಾರೆ.

ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಣೆ:
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು ಅವರು ಸೋಮವಾರ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿದ್ಯಾರ್ಥಿನಿಯರಾದ ಹನಿಷ್ಕಾ ಮತ್ತು ಬಿಂಬಿಕಾರ ಗುತ್ತಿಗಾರಿನ ಮತ್ತು ಅಡ್ಡನಪಾರೆಯ ಮನೆಗೆ ತೆರಳಿ ವಿದ್ಯಾರ್ಥಿನಿಯರ ಯೋಗ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು.