ಸೌಜನ್ಯಾ ಮರು ತನಿಖೆಗೆ ಆಗ್ರಹಿಸಿ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿಯಿಂದ ಮಂಗಳೂರಿನಲ್ಲಿ ಧರಣಿ..!

ಸೌಜನ್ಯಾ ಮರು ತನಿಖೆಗೆ ಆಗ್ರಹಿಸಿ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿಯಿಂದ ಮಂಗಳೂರಿನಲ್ಲಿ ಧರಣಿ..!

ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯೂ ಮಣಿಪುರ ವಾಗಬಹುದು: ಚಂದ್ರಾ ಕೋಲ್ಚಾರ್.

ಮಂಗಳೂರು: ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಮರುತನಿಖೆ ಮಾಡುವಂತೆ ಆಗ್ರಹಿಸಿ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ’ಯ ನೇತೃತ್ವದಲ್ಲಿ ಎರಡು ದಿನಗಳ ಧರಣಿ ಕಾರ್ಯಕ್ರಮ ಮಂಗಳೂರಿನಲ್ಲಿ ಆರಂಭವಾಗಿದೆ.


ಮಂಗಳೂರು ನಗರದ ಮಿನಿ ವಿಧಾನ ಸೌಧದ ಎದುರು ಆರಂಭಗೊಂಡ ಈ ಧರಣಿಯಲ್ಲಿ ಒಕ್ಕಲಿಗರ ಸಮುದಾಯದ ಅನೇಕ ಮುಖಂಡರು ಪಾಲ್ಗೊಂಡಿದ್ದರು. ಸೌಜನ್ಯಾ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ಮೂಲಕ ಮರುತನಿಖೆಮಾಡಬೇಕು .ಈ ಹಿಂದೆ ಸೌಜನ್ಯ ತನಿಖೆ ಮಾಡಿದ ತನಿಖಾಧಿಕಾರಿಯನ್ನು ಕೂಡ ತನಿಖೆಗೆ ಒಳಪಡಿಸಬೇಕು ಎಂಬ ಆಗ್ರಹವನ್ನು ವ್ಯಕ್ತ ಪಡಿಸಿದರು.
ಮರು ತನಿಖೆಗೆ ಆದೇಶ ಮಾಡುವವರೆಗೂ ಹೋರಾಟ ಮುಂದುವರಿಸಲಾಗುವುದು ಮತ್ತು ಅಗತ್ಯ ಬಿದ್ದರೆ ಕಾನೂನಾತ್ಮಕ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ ಹೇಳಿಕೆ ನೀಡಿದೆ,ಈ ಸಂದರ್ಭ ದಲ್ಲಿ ಮಾತನಾಡಿದ ಸುಳ್ಯ ತಾಲೋಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ , ಸೌಜನ್ಯ ಕೊಲೆ ಆರೋಪಿಗಳ ಪತ್ತೆ ಹಚ್ಚಲ್ಲು ಸರಕಾರ ಮನಸು ಮಾಡಬೇಕಾಗಿದೆ.ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯೂ ಮಣಿಪುರ ವಾಗಬಹುದು ಎಂದು ಎಚ್ಚರಿಸಿದರು.ಕಿರಣ್ ಬುಡ್ಲೆಗುತ್ತು ಸೇರಿದಂತೆ ಸುಳ್ಯದ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ರಾಜ್ಯ