ರಿಕ್ಷಾಕ್ಕೆ ತಗುಲಿ ಕೆಳಕ್ಕೆ ಬಿದ್ದ ಆಕ್ಟೀವಾ ಸವಾರನ ಮೈಮೇಲೆ ಹರಿದ ಕಾರು-ಸ್ಥಳದಲ್ಲೇ ಸಾವು

ರಿಕ್ಷಾಕ್ಕೆ ತಗುಲಿ ಕೆಳಕ್ಕೆ ಬಿದ್ದ ಆಕ್ಟೀವಾ ಸವಾರನ ಮೈಮೇಲೆ ಹರಿದ ಕಾರು-ಸ್ಥಳದಲ್ಲೇ ಸಾವು

ಮಂಗಳೂರು: ವಿದ್ಯಾರ್ಥಿಯೊಬ್ಬರ ಮೇಲೆ ಕಾರು ಹರಿದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಮೃತ ಪಟ್ಟ ಘಟನೆ ಮಂಗಳೂರು ಕುಂಟಿಕಾನ ಎಜೆ ಆಸ್ಪತ್ರೆ ಬಳಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕಾವೂರು ನಿವಾಸಿ ಕೌಶಿಕ್‌ (21) ಎಂದು ಗುರುತಿಸಲಾಗಿದೆ.
ಎಜೆ ಆಸ್ಪತ್ರೆಯಿಂದ ಆಕ್ಟೀವಾದಲ್ಲಿ ಹೊರಬರುತ್ತಿದ್ದಂತೆಯೇ ರಿಕ್ಷಾವೊಂದಕ್ಕೆ ತಗುಲಿ ಆಕ್ಟೀವಾ ಸವಾರ ಕೌಶಿಕ್‌ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಸ್ವಿಪ್ಟ್ ಕಾರು ಕೌಶಿಕ್‌ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ರಾಜ್ಯ