ಪುತ್ತೂರು: ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರೊಂದರ ಬಾಗಿಲು ತೆಗೆದ ಸಂದರ್ಭ ಸ್ಕೂಟರ್ ಡಿಕ್ಕಿಯಾದ ಘಟನೆ ನೆಲ್ಲಿಕಟ್ಟೆ ಸಮಿಪ ನಡೆದಿದ್ದು ಘಟನೆಯಿಂದ ಸ್ಕೂಟರ್ ಸವಾರನಿಗೆ ಗಾಯವಾಗಿದೆ.ಪಡೂರು ಗ್ರಾಮದ ಪಂಜಿಗುಡ್ಡೆ ನಿವಾಸಿ ಕೆ ಗೋಪಾಲಕೃಷ್ಣ ರಾವ್ ಗಾಯಗೊಂಡವರು.ಅವರು ಸ್ಕೂಟರ್‌ನಲ್ಲಿ ಪುತ್ತೂರು ಸಿಟಿ ಅಸ್ಪತ್ರೆ ಕಡೆ ಹೋಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ನಿಲ್ಲಿಸಿದ್ದ ಕಾರೊಂದರ ಚಾಲಕರೊಬ್ಬರು ಬಾಗಿಲು ಹಠಾತ್ ತೆರೆದ ಪರಿಣಾಮ ಸ್ಕೂಟರ್ ಕಾರಿನ ಬಾಗಿಲಿಗೆ ಡಿಕ್ಕಿಯಾಗಿದೆ.ಅಪಘಾತದಿಂದಾಗಿ ಗೋಪಾಲಕೃಷ್ಣ ರಾವ್ ಅವರು ಗಾಯಗೊಂಡಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

