
ಪುತ್ತೂರು: ಕುಂಬ್ರದಲ್ಲಿ ತಡರಾತ್ರಿ ಸರ್ಕಾರಿ ಕಾಲೇಜು, ಶಾಲೆ ಹಾಗೂ ಗ್ರಾ.ಪಂ ಕಛೇರಿಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಪದವಿ ಪೂರ್ವ ಕಾಲೇಜಿನ ಕಛೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಲ್ಮೇರಾದಲ್ಲಿದ್ದ ರೂ.10,000 ಗಳು ಹಾಗೂ ಗೋಡೆಯ ಮೇಲಿನ 03 ಡಿವಿಆರ್ ಗಳು ಕಳವುಗೈದಿದ್ದಾರೆ. ನಂತರ ಕಾಲೇಜಿನ ಹತ್ತಿರದ ಕೆ ಪಿ ಎಸ್ ನ ಹಿರಿಯ ಪ್ರಾಥಮಿಕ ಶಾಲೆಯ ಕಛೇರಿ ಬೀಗವನ್ನು ಮುರಿದಿದ್ದು ಎಲ್ಲಾ ಕಡೆ ಜಾಲಾಡಿದ್ದು, ಯಾವುದೇ ವಸ್ತು ಕಳವು ಆಗಿಲ್ಲ.
ಒಳಮೊಗ್ರು ಗ್ರಾಮ ಪಂಚಾಯತ್ ಕಛೇರಿ, ಗ್ರಾ.ಪಂ ಆಡಳಿತಾಧಿಕಾರಿಯ ಎರಡು ಕಛೇರಿಗಳ ಬಾಗಿಲಿನ ಬೀಗವನ್ನು ಮುರಿದು ಸುಮಾರು ರೂ 7000/- ಮೌಲ್ಯದ ಡಿವಿಆರ್ ಕಳವು ಮಾಡಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

