ಪುತ್ತೂರು ಶಾಸಕ ಅಶೋಕ್ ಕುಮಾರ್ ವಾರ್ನಿಂಗ್ ಬೆನ್ನಲ್ಲೇ ಬೀಡಿ ಕಾರ್ಮಿಕ ಮಹಿಳೆಯ ಮನೆಗೇ ತೆರಳಿ ಲಂಚದ ಹಣ ಮರು ಪಾವತಿಸಿದ ಉಗ್ರಾಣಿ.

ಪುತ್ತೂರು ಶಾಸಕ ಅಶೋಕ್ ಕುಮಾರ್ ವಾರ್ನಿಂಗ್ ಬೆನ್ನಲ್ಲೇ ಬೀಡಿ ಕಾರ್ಮಿಕ ಮಹಿಳೆಯ ಮನೆಗೇ ತೆರಳಿ ಲಂಚದ ಹಣ ಮರು ಪಾವತಿಸಿದ ಉಗ್ರಾಣಿ.

ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಲು ಮಹಿಳೆಯೊಬ್ಬರಿಂದ ಲಂಚ ಪಡೆದಿದ್ದ ಹಣವನ್ನು ಉಗ್ರಾಣಿಯೊಬ್ಬರು ಮಹಿಳೆಯ ಮನೆಗೇ ತೆರಳಿ ಮರಳಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಅಷ್ಟಮಿ ಕಾರ್ಯಕ್ರಮದ ಪ್ರಯುಕ್ತ ಶಾಸಕರಾದ ಅಶೋಕ್ ಕುಮಾರ್‌ ರೈ ಯಯವರು ಕುಂಡಡ್ಕ ದೇವಸ್ಥಾನಕ್ಕೆ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಗೆ ಬಂದಿದ್ದ ಕುಳಗ್ರಾಮದ ಮಹಿಳೆ ಚಂದ್ರಾವತಿ ಎಂಬವರು ಶಾಸಕರ ಬಳಿ ಬಂದು ನನ್ನ ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಿಲ್ಲ ಹಾಗೂ ಉಗ್ರಾಣಿಗೆ 30 ಸಾವಿರ ಹಣ ನೀಡಿದ್ದು, ಬೀಡಿ ಕಟ್ಟಿ ಜೀವನ ಮಾಡುವ ನನ್ನಿಂದ ಉಗ್ರಾಣಿ ಲಂಚ ಪಡೆದುಕೊಂಡಿದ್ದಾರೆ, ಹಣ ಕೊಟ್ಟರೂ ನನ್ನ ಕೆಲಸ ಮಾಡಿಕೊಟ್ಟಿಲ್ಲ ಎಂದು ತಮ್ಮ ಅಳಲನ್ನು ಶಾಸಕರಾದ ಅಶೋಕ್ ರೈಯವರಲ್ಲಿ ಹೇಳಿಕೊಂಡಿದ್ದರು.

ಮಹಿಳೆಯ ಆರೋಪವನ್ನು ಆಲಿಸಿದ ಶಾಸಕರು ತಕ್ಷಣವೇ ಉಗ್ರಾಣಿಗೆ ಕರೆ ಮಾಡಿ ಚಂದ್ರಾವತಿಯವರಿಂದ ಅಕ್ರಮ ಸಕ್ರಮ ವಿಲೇವಾರಿಗೆ ಪಡೆದುಕೊಂಡಿರುವ ಹಣವನ್ನು ಒಂದು ವಾರದೊಳಗೆ ಮರಳಿ ಕೊಡಬೇಕು ಇಲ್ಲವಾದರೆ ನಿಮ್ಮನ್ನು ಕೆಲಸದಿಂದ ಸಸ್ಪೆಂಡ್ ಮಾಡಿಸುತ್ತೇನೆ, ಎಂದು ಹೇಳಿ ಪಡೆದ ಹಣವನ್ನು ಮರಳಿಸಲು ಒಂದು ವಾರದ ಗಡುವು ನೀಡಿದ್ದರು. ಅದರಂತೆ ಮಹಿಳೆಯ ಮನೆಗೆ ಬಂದ ಉಗ್ರಾಣಿ ತಾನು ಲಂಚ ಪಡೆದುಕೊಂಡಿದ್ದ 30 ಸಾವಿರ ಹಣವನ್ನು ಮರಳಿಸಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರು ಶಾಸಕರ ದಿಟ್ಟ ನಡೆಯ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ರಾಜ್ಯ