
ಪುತ್ತೂರು, ಮೇ 14: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ವಿರುದ್ಧ ಆಕ್ಷೇಪಾರ್ಹ ಬ್ಯಾನರ್ ಅಳವಡಿಕೆಯನ್ನು ವಿರೋಧಿಸಿ ಪುತ್ತೂರು ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಿ ಪೋಲೀಸರಿಗೆ ದೂರು ನೀಡಲಾಯಿತು.



ಆಕ್ಷೇಪಾರ್ಹ ಬ್ಯಾನರ್ ಅಳವಡಿಕೆಯನ್ನು ವಿರೋಧಿಸಿ ಪುತ್ತೂರು ಬಿಜೆಪಿ ಘಟಕ ಕಿಡಿಗೇಡಿಗಳನ್ನು ಬಂಧಿಸಿ,ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ದೂರು ಪೋಲೀಸರಿಗೆ ದೂರು ನೀಡಿದೆ.
ಬಳಿಕ ಮಿನಿ ವಿಧಾನಸೌಧದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ದ್ವೇಷ ರಾಹಕಾರಣ ಹೆಚ್ಚಾಗಿದೆ, ಶಾಂತಿ-ಸುವ್ಯವಸ್ಥೆಗೆ ಮಾರಕವಾದ ಸ್ಥಿತಿ ನಿರ್ಮಾಣವಾಗಿದೆ.
ಪುತ್ತೂರಿನಲ್ಲಿ ಕಾಂಗ್ರೆಸ್ ನ ಗೂಂಡಾರಾಜ್ಯವನ್ನು ನಿರ್ನಾಮ ಮಾಡಿದ ಡಿ.ವಿ ಹಾಗು ಹಿಂದುತ್ವಕ್ಕಾಗಿ ದುಡಿದ ನಳಿನ್ ಕುಮಾರ್ ಕಟೀಲ್ ಗೆ ಅವಮಾನ ಮಾಡಲಾಗಿದೆ. ಪೋಲೀಸರು ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು. ದುಷ್ಕೃತ್ಯದ ಹಿಂದಿರುವವರನ್ನು ಪತ್ತೆಹಚ್ಚಬೇಕು ಎಂದು ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಒತ್ತಾಯ ಮಾಡಿದ್ದಾರೆ