ರಾಜ್ಯದಾದ್ಯಂತ ಗಮನ ಸೆಳೆದ ಕ್ಷೇತ್ರ ಪೂತ್ತೂರಲ್ಲಿ ಬಿಜೆಪಿ ಭದ್ರ ಕೋಟೆ ಬೇಧಿಸಿದ ಅಶೋಕ್ ಕುಮಾರ್ ರೈ.

ರಾಜ್ಯದಾದ್ಯಂತ ಗಮನ ಸೆಳೆದ ಕ್ಷೇತ್ರ ಪೂತ್ತೂರಲ್ಲಿ ಬಿಜೆಪಿ ಭದ್ರ ಕೋಟೆ ಬೇಧಿಸಿದ ಅಶೋಕ್ ಕುಮಾರ್ ರೈ.

ಪುತ್ತೂರಿನಲ್ಲಿ ಕಮಲ ಪಕ್ಷ ತೊರೆದು ಕೈ ಹಿಡಿದಿದ್ದ ಅಶೋಕ್ ಕುಮರ್ ರೈ ಪುತ್ತೂರು ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದರು ತೀವ್ರ ಪೈಪೋಟಿಗಳ ನಡುವೆ ಸ್ಪರ್ಧಿಸಿದ ಇವರ ಕೈಯನ್ನು ಪುತ್ತೂರಿನ ಜನತೆ ಮತ್ತಷ್ಟು ಭಲಪಡಿಸಿದ್ದಾರೆ, ಅಶೋಕ್ ಕುಮಾರ್ ರೈ ಬಿಜೆಪಿ ತೊರೆದು ಕಾಂಗ್ರೇಸ್ ಸೇರಿದ್ದ ಬೆನ್ನಲ್ಲೇ ಬಿ ಜೆ ಪಿ ಗೆ ಬಂಡಾಯ ಅಭ್ಯರ್ಥಿ ಸ್ಪರ್ಧಿಸಿದ್ದ ಅರುಣ್ ಪುತ್ತಿಲ ಸ್ಪರ್ಧೆ ಪುತ್ತೂರಿನಲ್ಲಿ ಬಿ ಜೆಪಿ ಅಸ್ತಿತ್ವವನ್ನೇ ನಾಶ ಪಡಿಸುವಂತಾಗಿತ್ತು, ಬಿ‌ಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರವಾಗಿ ಉತ್ತರ ಪ್ರದೇಶದ ಯೋಗಿ ಸೇರಿದಂತೆ ಯಾರೇ ಬಂದರು ಬಿಜೆಪಿ ಗೆಲುವಿನ ಲಕ್ಷಣ ಆರಂಭದಿಂದಲೇ ತೋರಿಸಲೇ ಇಲ್ಲ ಕೊನೆಯದಾಗಿ ಮೂರನೇ ಸ್ಥಾನಕ್ಕೆ ಇಳಿಯಬೇಕಾದ ಹೀನಾಯ ಸ್ಥಿತಿ ಒದಗಿ ಬಂದಿದೆ, ಅಶೋಕ್ ಕುಮಾರ್ ರೈ ವಿಜಯಿ ಯಾದರೆ ಎರಡನೇ ಸ್ಥಾನ ಪಡೆದ ಪಕ್ಷೇತರ ಅಭ್ಯರ್ಥಿ ಜಿಲ್ಲೆಯಲ್ಲಿ ಹೊಸ ಇತಿಹಾಸವನ್ನು ಹುಟ್ಟು ಹಾಕಿದ್ದಾರೆ.

ಅಶೋಕ್ ಕುಮಾರ್ ರೈ (ಕಾಂಗ್ರೆಸ್) –
61797
ಅರುಣ್ ಪುತ್ತಿಲ (ಪಕ್ಷೇತರ) – 59124
ಆಶಾ ತಿಮ್ಮಪ್ಪ (ಬಿಜೆಪಿ) – 34871
ಶಾಫಿ ಬೆಳ್ಳಾರೆ (ಎಸಿಪಿಐ) -2073

ರಾಜ್ಯ