ಪೊನ್ನಪೇಟೆಯಲ್ಲಿ ವಿದ್ಯುತ್ ಆಘಾತ : 5 ಹಸುಗಳ ಸಾವು

ಪೊನ್ನಪೇಟೆಯಲ್ಲಿ ವಿದ್ಯುತ್ ಆಘಾತ : 5 ಹಸುಗಳ ಸಾವು

ವಿದ್ಯುತ್ ಮಾರ್ಗದ ತಂತಿ ತುಂಡಾಗಿ ಬಿದ್ದ ಪರಿಣಾಮ ಒಂದು ಕರು ಸಹಿತ ಐದು ಹಸುಗಳು ಸಾವನ್ನಪ್ಪಿರುವ ಘಟನೆ ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಆಲೆಮಾಡ ನಾಣಯ್ಯ ಅವರಿಗೆ ಸೇರಿದ ಹಸುಗಳನ್ನು ಭಾನುವಾರ ಮಧ್ಯಾಹ್ನ ಮೇಯಲು ಬಿಡಲಾಗಿತ್ತು. ಗದ್ದೆಯಲ್ಲಿ ವಿದ್ಯುತ್ ಮಾರ್ಗದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ ಮತ್ತು ತೇವಾಂಶ ಇದ್ದ ಪರಿಣಾಮ ವಿದ್ಯುತ್ ಹರಿದು ಸ್ಥಳದಲ್ಲಿಯೇ ಐದು ಜಾನುವಾರುಗಳು ಮೃತಪಟ್ಟಿವೆ.
ಚೆಸ್ಕಾಂ ನಿರ್ಲಕ್ಷö್ಯವೇ ಈ ಘಟನೆಗೆ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಸುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯ