ಸುಳ್ಯ: ಬೇಲಿ ನಾಶ, ಜಾತಿನಿಂದನೆ: ಪೆರುವಾಜೆ ಗ್ರಾ.ಪಂ. ಸದಸ್ಯ ಸಚಿನ್ ರಾಜ್ ವಿರುದ್ದ ಪ್ರಕರಣ ದಾಖಲು: ಕೇಸು ಹಿಂತೆಗೆಯುವಂತೆ ಸಚಿನ್ ರಾಜ್ ಶೆಟ್ಟಿ ಪರವಾಗಿ ಪ್ರತಿಭಟನೆಗೆ ನಿರ್ಧಾರ.

ಸುಳ್ಯ: ಬೇಲಿ ನಾಶ, ಜಾತಿನಿಂದನೆ: ಪೆರುವಾಜೆ ಗ್ರಾ.ಪಂ. ಸದಸ್ಯ ಸಚಿನ್ ರಾಜ್ ವಿರುದ್ದ ಪ್ರಕರಣ ದಾಖಲು: ಕೇಸು ಹಿಂತೆಗೆಯುವಂತೆ ಸಚಿನ್ ರಾಜ್ ಶೆಟ್ಟಿ ಪರವಾಗಿ ಪ್ರತಿಭಟನೆಗೆ ನಿರ್ಧಾರ.

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಪೆಲತಡ್ಕ ಎಂಬಲ್ಲಿ ಬೇಲಿ ನಾಶ ಮಾಡಿರುವುದಾಗಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿರುವುದಾಗಿ ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ವ್ಯಕ್ತಿಯೋರ್ವರು ಜು.18 ರಂದು ದೂರು ನೀಡಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಮೋದರ ನಾಯ್ಕ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಸಚಿನ್ ರಾಜ್ ಶೆಟ್ಟಿ ವಿರುದ್ಧ ಕಲಂ 504, 506 ಐಪಿಸಿ ಮತ್ತು The SC & ST Act 2015 (U/s-3(1) (r) (s) 3(2)(VA) ರಂತೆ ಪ್ರಕರಣ ದಾಖಲಾಗಿದೆ.

ಕೇಸು ಹಿಂತೆಗೆಯುವಂತೆ ಕ.ರಾ.ದ.ಸಂ.ಸ.ಜಿಲ್ಲಾ ಸಂಘದಿಂದ ಪ್ರತಿಭಟನೆಗೆ ನಿರ್ಧಾರ.

ಇನ್ನು ಇದೇ ಪ್ರಕರಣಕ್ಕೆ ಸಂಭಂದಿಸಿದಂತೆ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್
ಶೆಟ್ಟಿಯವರ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸಿ
ದಲಿತ ದೌರ್ಜನ್ಯ ಕಾಯಿದೆಯನ್ನು ಉಲ್ಲಂಘಿಸಲಾ ಗಿದ್ದು, ಕೂಡಲೇ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು.ಇಲ್ಲವಾದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕ.ರಾ.ದ.ಸಂ.ಸ.ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಮತ್ತು ಅವರ ತಂಡ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ರಾಜ್ಯ