ಪೆರಾಜೆ‌ : ನಿಡ್ಯಮಲೆ – ಹಾಲೆಕಾಡು ವ್ಯಾಪ್ತಿಯಲ್ಲಿ ಕೃಷಿ ತೋಟಕ್ಕೆ‌ ನುಗ್ಗುವ ಆನೆಗಳ‌ ಹಿಂಡು : ಕೃಷಿ ನಾಶ – ಶಾಶ್ವತ ಪರಿಹಾರಕ್ಕೆ ಆಗ್ರಹ

ಪೆರಾಜೆ‌ : ನಿಡ್ಯಮಲೆ – ಹಾಲೆಕಾಡು ವ್ಯಾಪ್ತಿಯಲ್ಲಿ ಕೃಷಿ ತೋಟಕ್ಕೆ‌ ನುಗ್ಗುವ ಆನೆಗಳ‌ ಹಿಂಡು : ಕೃಷಿ ನಾಶ – ಶಾಶ್ವತ ಪರಿಹಾರಕ್ಕೆ ಆಗ್ರಹ

ಪೆರಾಜೆ ಗ್ರಾಮದ ನಿಡ್ಯಮಲೆ – ಹಾಲೆಕಾಡು ಪ್ರದೇಶದಲ್ಲಿ ಕೃಷಿ ತೋಟಕ್ಕೆ ಆನೆಗಳ ಹಿಂಡು‌ಬಂದು ಕೃಷಿ‌ ಹಾನಿ ಗೊಳಿಸಿರುವ ಘಟನೆ ಜು.5 ರಂದು ವರದಿಯಾಗಿದೆ.

ಕಳೆದ ಎರಡು ದಿನಗಳಿಂದ ಈ ಭಾಗದ ಕೃಷಿಕರಾದ ಬೆಳ್ಳಿಪ್ಪಾಡಿ ತಿಮ್ಮಪ್ಪ, ಕುಡಿಯರ ಸುಂದರ, ಚಾಮಕಜೆ ಲಿಂಗಯ್ಯ, ಚಾಮಕಜೆ ದುಗ್ಗಪ್ಪ, ಚಾಮಕಜೆ ನಾರಾಯಣ, ಹೊದ್ದೆಟ್ಟಿ ಗೋಪಾಲಕೃಷ್ಣ, ಕುತ್ಯಾಳ‌ ಜನಾರ್ದನ ಎಂಬವರ ತೋಟಕ್ಕೆ ಹಾನಿಗಳ ಹಿಂಡು‌ಬಂದು ಕೃಷಿ ಹಾನಿಗೊಳಿಸಿವೆ ಎಂದು ತಿಳಿದುಬಂದಿದೆ.

ಪಕ್ಕದಲ್ಲೇ ಇರುವ ಕೋಳಿಕ್ಕಮಲೆ ಬೆಟ್ಟದ ಕೆಳ ಭಾಗದ ಕಾಡಿನಿಂದ ಆನೆಗಳು ರಾತ್ರಿ ವೇಳೆ ಕೃಷಿ ತೋಟಕ್ಕೆ ಬರುತ್ತಿದ್ದಾವೆ ಎಂದು ಹೇಳಲಾಗುತ್ತಿದೆ. ಆನೆಗಳನ್ನು ಓಡಿಸುವ ಪ್ರಯತ್ನ ಊರವರು ಮಾಡುತ್ತಾರಾದರೂ‌ ಮತ್ತೆ ಮತ್ತೆ ಅದು‌ ಬರುತ್ತಿವೆ. ಆನೆ ಬರದಂತೆ ತಡೆಯಲು ಶಾಶ್ವತ ಪರಿಹಾರ ಆಗಬೇಕು ಎಂದು ಊರವರು ಒತ್ತಾಯಿಸುತ್ತಿದ್ದಾರೆ.

ನಮ್ಮ ತೋಟದ ಸುಮಾರು 100 ಕ್ಕೂ ಅಡಿಕೆ ಮರ – ಗಿಡವನ್ನು, ಬಾಳೆ ಗಿಡವನ್ನು ಪುಡಿ ಮಾಡಿದೆ. ಓಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮಳೆಯೂ ಬರುತ್ತಿರುವುದರಿಂದ ಕಷ್ಟವಾಗುತ್ತಿದೆ. ಆನೆ ಬಾರದಂತೆ ಇಲಾಖೆ ಸೂಕ್ತ ಕ್ರಮಕೈಗೊಂಡು ನಮ್ಮ ಕೃಷಿ ಉಳಿಸುವ ಕೆಲಸ ಆಗಬೇಕು ಎಂದು ಬೆಳ್ಳಿಪ್ಪಾಡಿ‌ ಗಣೇಶ್ ಮಾಹಿತಿ ತಿಳಿಸಿದ್ದಾರೆ.

ರಾಜ್ಯ