ಒಕ್ಕಲಿಗ ಹಾಗೂ ಅದರ ಉಪಜಾತಿಗಳಿಗೆ ಶೇ. 12ರಷ್ಟು ಮೀಸಲಾತಿ ನೀಡುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಡಾ. ರೇಣುಕಾ ಪ್ರಸಾದ್ ಕೆ.ವಿ ಒತ್ತಾಯ

ಒಕ್ಕಲಿಗ ಹಾಗೂ ಅದರ ಉಪಜಾತಿಗಳಿಗೆ ಶೇ. 12ರಷ್ಟು ಮೀಸಲಾತಿ ನೀಡುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಡಾ. ರೇಣುಕಾ ಪ್ರಸಾದ್ ಕೆ.ವಿ ಒತ್ತಾಯ

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬೆಂಗಳೂರು ಇವರು ಹಿಂದುಳಿದ ವರ್ಗಗಳ ವಿವಿಧ ಜಾತಿ ಜನಾಂಗಗಳಿಂದ ಬಂದಿರುವ ಮನವಿಗಳ ಕುರಿತು ಬಹಿರಂಗ ವಿಚಾರಣೆ ಸಂದರ್ಭದಲ್ಲಿ ಸರಕಾರದ ಮೀಸಲಾತಿ ನೀತಿಯಂತೆ ಒಕ್ಕಲಿಗ ಹಾಗೂ ಅದರ ಉಪಜಾತಿಗಳಿಗೆ ಶೇ. 12ರಷ್ಟು ಮೀಸಲಾತಿ ನೀಡುವಂತೆ
ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಆಯೋಗಕ್ಕೆ ಒತ್ತಾಯಿಸಿದರು.ಬೆಂಗಳೂರು ದಿ.ದೇವರಾಜ ಅರಸು ಅಡಿಟೋರಿಯಂನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಏಳು ಕೋಟಿ ಜನಸಂಖ್ಯೆಯಲ್ಲಿ ಒಕ್ಕಲಿಗ ಮತ್ತು 135 ಉಪಜಾತಿಗಳ ಜನಸಂಖ್ಯೆ ಶೇ.15ರಷ್ಟಿದೆ. ಕರ್ನಾಟಕ
ಒಕ್ಕಲಿಗ ಜಾತಿ ಹಾಗೂ ಉಪಜಾತಿಗಳ ಮೀಸಲಾತಿ ನೀಡಲು ಪ್ರವರ್ಗ 3 ಎ ನಲ್ಲಿ ಸೇರಿದೆ, ಆದರೆ ಇದರಲ್ಲಿ ಒಕ್ಕಲಿಗರು (20ಉಪಜಾತಿಗಳು) ಕೊಡವರು ಹಾಗೂ ಬಲಿಜ (13 ಉಪಜಾತಿ) ಗಳನ್ನು ಸೇರಿಸಲಾಗಿದೆ ಎಂಬುದಾಗಿ ವಿವರಿಸಿದರು. ಇದರಿಂದಾಗಿ ಪ್ರವರ್ಗ 3ರಲ್ಲಿ ಶೇ. ನಾಲ್ಕರಷ್ಟು ಅವಕಾಶವಿದ್ದರೂ, ಒಕ್ಕಲಿಗರಿಗೆ ಶೇ. ೨.೫ರಷ್ಟು ಪ್ರಾತಿನಿಧ್ಯಕ್ಕೆ ಸೀಮಿತವಾಗಿದೆ. ಕಾರಣ ಕೊಡವರು ಹಾಗೂ ಬಲಿಜರು ೩ಎ ಯಲ್ಲಿರುವುದರಿಂದ ಅವರಿಗೂ ಅವಕಾಶವಿದೆ
ಎಂದು ತಿಳಿಸಿದರು. ಇದರಿಂದಾಗಿ ಒಕ್ಕಲಿಗರಿಗೆ ಸಾಕಷ್ಟು ಅನ್ಯಾಯ ನಡೆಯುತ್ತಿದೆ. ಸರಕಾರದ ಇತ್ತೀಚಿನ ನಿರ್ಧಾರಗಳಿಂದ ಒಕ್ಕಲಿಗರಿಗೆ ಇಲ್ಲಿಯವರೆಗೂ ದೊರಕುತ್ತಿದ್ದ ಅವಕಾಶಗಳು ಕ್ಷೀಣಿಸಿದೆ. ಶೇ. ೧೫ರಷ್ಟು ಜನಸಂಖ್ಯೆ ಇರುವ ಒಕ್ಕಲಿಗರಿಗೆ ಶೇ. 12ಕ್ಕೆ ನಿಗದಿಪಡಿಸುವುದೊಂದೇ ಪರಿಹಾರ ಎಂದು ತಿಳಿಸಿದರು.ಸುಪ್ರೀಂ ಕೋರ್ಟಿನಲ್ಲಿ ೧೯೯೨ ರಲ್ಲಿ ಇಂದಿರಾ ಸಹಾನೆ ತೀರ್ಪಿನಲ್ಲಿ ಮೀಸಲಾತಿ ಶೇ. ೫೦ರಷ್ಟು ಮೀರಬಾರದೆಂದು ಹೇಳಿತ್ತು. ಅದರಂತೆ ಕರ್ನಾಟಕ ಸರಕಾರ ೧೯೯೫ ರಿಂದ ಶೇ. ೫೦ರ ಮಿತಿಯನ್ನು ಕಾಪಾಡಿತ್ತು. ಪ್ರವರ್ಗ 3ಎ ನಲ್ಲಿ ಮೀಸಲಾತಿಯನ್ನು ಶೇ.4 ರಿಂದ 12ಕ್ಕೆ ಹೆಚ್ಚಿಸಬೇಕು. ಇದರಿಂದ ಒಕ್ಕಲಿಗರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆರಲು ಹಾಗೂ ಸಮಾಜಮುಖಿಯಾಗಿ ಬದುಕಲು ಅವಕಾಶವಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಡಾ.ರೇಣುಕಾಪ್ರಸಾದ್ ವಿವರಿಸಿದರು

ರಾಜ್ಯ