ನಾಪತ್ತೆಯಾಗಿದ್ದ ಮರ್ಕಂಜದ ವ್ಯಕ್ತಿ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.

ನಾಪತ್ತೆಯಾಗಿದ್ದ ಮರ್ಕಂಜದ ವ್ಯಕ್ತಿ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.

: ಮರ್ಕಂಜದ ನಿವಾಸಿಯೊಬ್ಬರು ಕಳೆದೆರಡು ದಿನಗಳ ಹಿಂದೆ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು,ಇದೀಗ ಅವರ ಮೃತದೇಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕುಸುಮಾಧರ ಮುಂಡೋಡಿ ಎಂಬವರ ಮೃತದೇಹವು ಅರಂತೋಡಿನಲ್ಲಿ ಪತ್ತೆಯಾಗಿದೆ.ಎರಡು ದಿನಗಳ ಹಿಂದೆ ಅವರು ನಾಪತ್ತೆಯಾಗಿದ್ದು, ಈ ಕುರಿತು ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು.ಕುಸುಮಾಧರರು ಅರಂತೋಡಿನಲ್ಲಿ ವಾಸವಾಗಿದ್ರು. ಇಂದು ಅವರು ವಾಸವಿದ್ದ ಮನೆಯ ಪಕ್ಕದ ತೋಟದಲ್ಲಿ ಕೊಕ್ಕೋ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ರಾಜ್ಯ