
ಅರೆಭಾಷೆ ಒಳಗೊಂಡ ‘ಮೂಗಜ್ಜನ ಕೋಳಿ’ ಸಿನಿಮಾ ತಯಾರಾಗಿದೆ.ರಾಷ್ಟ್ರಶಸ್ತಿ ವಿಜೇತ ‘ಜೀಟಿಗೆ’ ತುಳು ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಮಾಡ ಈ ಚಿತವನ್ನು ನಿರ್ದೇಶಿಸಿದ್ದಾರೆ.’ಸುಳ್ಯದ ಗೌಡ ಸಮುದಾಯದವರು ಮಾತನಾಡುವ ಅರೆ ಭಾಷೆಯನ್ನು ಇಟ್ಟುಕೊಂಡು ಚಿತ್ರವೊಂದನ್ನು ನಿರ್ದೇಶಿಸುವ ಹಂಬಲದಿಂದ ನಾನು’ಮೂಗಜ್ಜನ ಕೋಳಿ’ ಚಿತ್ರವನ್ನು ನಿರ್ದೇಶಿಸಿದ್ದೇನೆ.



ಇದೊಂದು ಮಕ್ಕಳ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣವಾಗಿದೆ. ಸುಳ್ಯದ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಇದು
ಅರೆಭಾಷೆಯಲ್ಲಿ ನಿರ್ಮಾಣವಾಗಿರುವ ಪ್ರಥಮ ಚಿತ್ರ. ಕೆ.ಸುರೇಶ್ ಈ ಚಿತ್ರದ ನಿರ್ಮಾಪಕರು.
ವಿಧೇಶದಲ್ಲಿ ಬೆಳೆದ ಹುಡುಗಿಯೊಬ್ಬಳು ಸುಳ್ಯಕ್ಕೆ ಬರುತ್ತಾಳೆ. ಅಲ್ಲಿನ ಸುಂದರ ಪರಿಸರ ಕಂಡು ಮುಗ್ಧ
ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಹುಡುಗಿಯ ಪಕ್ಕದ ಮನೆಯಲ್ಲಿ ಮಾತುಬಾರದ “ಮೂಗ, ಕೋಳಿ ಸಾಕಿಕೊಂಡು ಇರುತ್ತಾನೆ. ಈ ಹುಡುಗಿ ಹಾಗೂ ಮೂಗಜ್ಜನ ನಡುವೆ ನಡೆಯುವ ಸಂಘರ್ಷ ಹಾಗೂ ಸಂಬಂಧಗಳ ಕಥೆಯೇ ಮೂಗಜ್ಜನ ಕೋಳಿಕಥೆ’ಎಂದು ನಿರ್ದೇಶಕ ಸಂತೋಷ್ ಹೇಳಿದ್ದಾರೆ.ಮೂಗಜ್ಜನ ಪಾತ್ರದಲ್ಲಿ ನವೀನ್ ಡಿ ಪಡೀಲ್ ಹಾಗೂ ಕನಸು ಎಂಬ
ಮಗುವಿನ ಪಾತ್ರದಲ್ಲಿ ಕುಮಾರಿ ಗೌರಿಕ ದೀಪುಲಾಲ್ ಅಭಿನಯಿಸಿದ್ದಾರೆ.ಪ್ರಕಾಶ್ ತುಮಿನಾಡು, ದೀಪಕ್ ರೈಪಾಣಾಜೆ, ರೂಪಶ್ರೀ ವರ್ಕಾಡಿ,ಸುಕನ್ಯಾ, ರಾಘವೇಂದ್ರ ಭಟ್, ಡಾ. ಜೀವನ್ ರಾಮ್ ಸುಳ್ಯ, ಕುಮಾರಿ ಸಾನಿಧ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಡಾ. ಜೀವನ್
ರಾವರ್ ಸುಳ್ಯ ನಿರ್ದೇಶಿಸಿದ್ದ’ಅಮರಸುಳ್ಯ ಸ್ವಾತಂತ್ರ್ಯ ಹೋರಾಟ 1837′ ನಾಟಕದ ತುಣುಕುಗಳನ್ನು ಈ
ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ರಮ್ಯಶ್ರೀ ನಡುಮನೆ ಸಹಾಯಕ ನಿರ್ಧೇಶಕರಾಗಿದ್ದಾರೆ, ಸುರೇಶ್ ಅರಸ್ ಸಂಕಲನ, ರಂಜಿತ್ ಅಂಬಾಡಿ ವರ್ಣಾಲಂಕಾರ,
ವಿಷ್ಣುಪ್ರಸಾದ್ ಛಾಯಾಗ್ರಹಣ, ಅರುಣ್ ಗೋಪನ್ ಹಾಡು ಸಂಯೋಜನೆ ಹಾಗೂ ದೀಪಾಂಕುರನ್
ಅವರ ಹಿನ್ನೆಲೆ ಸಂಗೀತವಿದೆ.ಗೌರವ್ ಪೆರಂಗಜೆ, ಸಾಯಿ ನಕ್ಷತ್ರ ಮಜಿಕೋಡಿ,ಲಾಸ್ಯ ಕಲ್ಲುಗುಂಡಿ,ಲೇಖನ್ ಅರುಣಗುಂಜ, ಲಾಲಿತ್ಯ ಜಾಲುಮನೆ,ಸ್ವರ ಸುಳ್ಯ, ಓಂಕಾರ್, ಸಾನಿಧ್ಯ, ಶಿವರಾಜ್,ಮೊದಲಾದ ಸುಳ್ಯ ಆಸುಪಾಸಿನ ಪ್ರತಿಭಾನ್ವಿತ ಮಕ್ಕಳು ತಾರಾಗಣದಲ್ಲಿದ್ದಾರೆ.
