
ಅಜ್ಜಾವರ ಗ್ರಾಮದ ಮೇನಾಲದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಶ್ರೀ ಕೃಷ್ಣ ಭಜನಾ ಮಂದಿರ ಮೇನಾಲ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾ ಕೂಟ ನಡೆಯಿತು, ಮೆನಾಲ ಮಸೀದಿ ಮತ್ತು ಭಜನಾ ಮಂದಿರ ನಡುವಿನ ವಿವಾಧ ಬೂಮಿಯಲ್ಲಿ ಕಾರ್ಯಕ್ರಮ ನಡೆಯುವ ಕಾರಣ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ನೇತ್ರತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.



ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮೇನಾಲ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಧರ್ಮದರ್ಶಿ ಪದ್ಮನಾಭ ಸ್ವಾಮಿ, ಮೇನಾಲ ಭಜನಾ ಮಂದಿರದ ಅಧ್ಯಕ್ಷ ಕಮಲಾಕ್ಷ ರೈ ಮೇನಾಲ,ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ರಾಘವ ಗೌಡ ಅತ್ಯಾಡಿ, ಸುಕುಮಾರ್ ಕಲ್ಲಗುಡ್ಡೆ, ಕಿರಣ್ ರೈ ಮೇನಾಲ, ಮಹೇಶ್ ರೈ ಮೇನಾಲ ಮೊದಲಾದವರಿದ್ದರು.


