
ಮಂಗಳೂರು: ವಿದ್ಯುತ್ ಶಾಕ್ ತಗುಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮೂಡುಶೆಡ್ಡೆ ಎಂಬಲ್ಲಿ ನಡೆದಿದೆ. ಸೋನ್ ಸಿಂಗ್ (22) ಮೃತಪಟ್ಟ ದುರ್ದೈವಿ.
ಯುವರಾಜ್ ಶಿವ ಕೃಪ ಏರೇಂಜರ್ಸ್ ಗೋದಾಮಿನಲ್ಲಿ ಈ ಅವಘಡ ಸಂಭವಿಸಿದೆ. ಸೋನ್ ಸಿಂಗ್ ಶಿವ ಕೃಪ ಏರೇಂಜರ್ಸ್ ಗೋಡನ್ನಲ್ಲಿ ಕೆಲಸ ಮಾಡುತ್ತಿರುವ ವೇಳೆ ಗೋಡನ್ ಶಟರ್ ನಲ್ಲಿ ವಿದ್ಯುತ್ ಹರಿದು ಸಾವನ್ನಪ್ಪಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

