ಒಂದು ತಿಂಗಳೊಳಗೆ ಉಚಿತ ಗ್ಯಾರಂಟಿ ಜಾರಿಯಾಗದಿದ್ದರೆ ಪ್ರತಿಭಟನೆ – ನಳಿನ್ ಕುಮಾರ್ ಕಟೀಲ್.ಪ್ರವೀಣ್ ಪತ್ನಿಗೆ ಕೇಂದ್ರ ಸರಕಾರ ಸಾಮ್ಯದ ಸಂಸ್ಥೆಗಳಿಂದ ಕೆಲಸ ಕೊಡಿಸಲು ಬದ್ಧ.

ಒಂದು ತಿಂಗಳೊಳಗೆ ಉಚಿತ ಗ್ಯಾರಂಟಿ ಜಾರಿಯಾಗದಿದ್ದರೆ ಪ್ರತಿಭಟನೆ – ನಳಿನ್ ಕುಮಾರ್ ಕಟೀಲ್.
ಪ್ರವೀಣ್ ಪತ್ನಿಗೆ ಕೇಂದ್ರ ಸರಕಾರ ಸಾಮ್ಯದ ಸಂಸ್ಥೆಗಳಿಂದ ಕೆಲಸ ಕೊಡಿಸಲು ಬದ್ಧ.

ಮಂಗಳೂರು ಮೇ 27: ಇನ್ನು ಒಂದು ತಿಂಗಳೊಳಗೆ ಉಚಿತ ಗ್ಯಾರಂಟಿ ಘೋಷಣೆ ಜಾರಿಯಾಗದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಕುಮಾರಿ‌ ಅವರಿಗೆ ಈ‌ ಹಿಂದೆ ಬಿಜೆಪಿ ಸರಕಾರ ಅನುಕಂಪದ ಆಧಾರದಲ್ಲಿ ಕೆಲಸ‌ ಕೊಡಿಸಿತ್ತು.‌ ಇದೀಗ ಕಾಂಗ್ರೆಸ್ ಸರಕಾರದ ಅವರನ್ನು ಉದ್ಯೋಗದಿಂದ ಬಿಡುಗಡೆ ಮಾಡಿದೆ.‌ ಕಾಂಗ್ರೆಸ್ ಈ ರೀತಿಯ ದ್ವೇಷ ಸಾಧಿಸದೆ ಅವರಿಗೆ ಮತ್ತೆ ಕೆಲಸ ನೀಡಬೇಕು. ಒಂದು ವೇಳೆ ಕೆಲಸ ನೀಡದಿದ್ದರೆ ಕೇಂದ್ರ ಸರಕಾರ ಸಾಮ್ಯದ ಸಂಸ್ಥೆಗಳನ್ನು ಕೆಲಸ ಕೊಡಿಸುತ್ತೇವೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ರಾಜ್ಯ