ಗ್ಯಾರೇಜ್ ನಲ್ಲಿ ಭಾರೀ ಅಗ್ನಿ ಅವಘಡ : ಹಲವು ವಾಹನಗಳು ಭಸ್ಮ.

ಗ್ಯಾರೇಜ್ ನಲ್ಲಿ ಭಾರೀ ಅಗ್ನಿ ಅವಘಡ : ಹಲವು ವಾಹನಗಳು ಭಸ್ಮ.

ಮಂಗಳೂರು: ಗ್ಯಾರೇಜ್ ನಲ್ಲಿ ಭಾರೀ ಅಗ್ನಿ ಅವಘಡ ಉಂಟಾಗಿರುವ ಘಟನೆ ನಗರ ಹೊರವಲಯದ ಜಪ್ಪಿನಮೊಗರು ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66 ಬದಿಯಲ್ಲಿರುವ ವಾಹನ ದುರಸ್ಥಿ ಮಾಡುವ ಗ್ಯಾರೇಜ್ ಸಂಪೂರ್ಣ ಹೊತ್ತಿ ಉರಿಯುತ್ತಿದ್ದು ಹತ್ತಾರು ವಾಹನಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ವಾಹನಗಳು, ಪೊಲೀಸ್ ಅಧಿಕಾರಿಗಳು ಧಾವಿಸಿ ಬಂದಿದ್ದು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ.

ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್‌ಫರ್ಮರ್ ಸ್ಪೋಟಗೊಂಡು ಈ ಅವಘಡ ಸಂಭವಿಸಿದೆ ಎಂದು ಆರಂಭಿಕ ಮಾಹಿತಿ ಲಭ್ಹವಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ರಾಜ್ಯ