ಮನೆಯ ಮೇಲೆ ಬಿದ್ದ ಬೃಹತ್ ಆಕಾರದ ಬೀಟೆ ಮರ: ಪ್ರಾಣಾಪಯದಿಂದ ಪಾರಾದ ಮನೆ ಮಾಲಕ:

ಮನೆಯ ಮೇಲೆ ಬಿದ್ದ ಬೃಹತ್ ಆಕಾರದ ಬೀಟೆ ಮರ: ಪ್ರಾಣಾಪಯದಿಂದ ಪಾರಾದ ಮನೆ ಮಾಲಕ:

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬೊಳುಗಲ್ಲು ಎಂಬಲ್ಲಿ ನಿರ್ಮಿಸುತ್ತಿದ ಹೊಸ ಮನೆಯ ಮೇಲೆ ಮರವೊಂದು ಉರುಳಿಬಿದ್ದು ಮನೆ ಸಂಪೂರ್ಣ ಜಖಂಗೊಂಡು ಮತ್ತು ಮನೆ ಮಾಲಕ ಓಡಿ ಪ್ರಾಣಾಪಯದಿಂದ ಪಾರಾದ ಘಟನೆ ಜು.5ರಂದು ವರದಿಯಾಗಿದೆ.
ಬೊಳುಗಲ್ಲು ಬಾಲಚಂದ್ರ ಎಂಬವರು ನೂತನ ಮನೆ ನಿರ್ಮಿಸುತ್ತಿದ್ದು ಮನೆ ಪಕ್ಕದಲ್ಲಿದ್ದ ಮರವೊಂದು ಸುರಿಯುತ್ತಿರುವ ಭಾರೀ ಗಾಳಿಮಳೆಗೆ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಮರ ಬೀಳುತ್ತಿದ್ದಂತೆ ಮನೆ ಮಾಲಕ ಹಿಂದಿನ ಬಾಗಿಲ ಮೂಲಕ ಓಡಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಎರಡು ವರ್ಷದ ಹಿಂದೆ ಸರಕಾರದ ಸಹಾಯಧನ ಪಡೆದು ಹೊಸ ಮನೆ ಕಟ್ಟಲು ಆರಂಭಿಸಿ ಅದು ಇತ್ತೀಚೆಗೆ ಕೆಲಸ ಅಂತಿಮ ಹಂತಕ್ಕೆ ಬಂದಿತ್ತು ಎಂದು ಹೇಳಲಾಗಿದೆ ಮನೆ ಮಾಲಕ ಅದೇ ಮನೆಯಲ್ಲಿ ರಾತ್ರಿ ವೇಳೆ ತಂಗುತ್ತಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಜನಪ್ರತಿನಿಧಿಗಳು ಭೇಟಿ ನೀಡಿದ್ದು .ಪರಿಹಾರ ಕಾರ್ಯ ನಡೆಯುತ್ತಿದೆ

ರಾಜ್ಯ