
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತ ಸಾಗರ ಹರಿದು ಬರುತ್ತಿದ್ದು,
ಅವರವರ ಭಕ್ತಿ, ಶ್ರದ್ದೆ, ಅನುಸರವಾಗಿ, ಶಿವರಾತ್ರಿ ಪಾದಯಾತ್ರೆ ವರ್ಷವು ನಡೆಸಿಕೊಂಡು ಬರುವ ಭಕ್ತರು ಈ ವರ್ಷ ಪಾದಯಾತ್ರೆ ಮುಗಿಸಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದು ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಆಗಮಿಸಿ, ಕುಮಾರಧಾರ ನದಿಯಲ್ಲಿ ಮಿಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆಯುತ್ತಿದ್ದಾರೆ, ಈ ಭಾರಿ ಮಹಾಶಿವರಾತ್ರಿ ಪ್ರಯುಕ್ತ ರಜೆ ಶನಿವಾರವಾಗಿದ್ದು ಆದಿತ್ಯವಾರ ಎಂದಿನ ರಜೆ ಹಿನ್ನಲೆಯಲ್ಲಿ ದೂರದ ಊರುಗಳಿಂದ ಭಕ್ತರ ದಂಡು ಹರಿದುಬರುತ್ತಿದೆ.ಸಾವಿರಾರು ಸಂಖ್ಯೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯನ ದರ್ಶನ ಪಡೆಯುತ್ತಿದ್ದಾರೆ.



ವರದಿ: ಶಿವ ಭಟ್ ಸುಬ್ರಹ್ಮಣ್ಯ.