ವೈಭವದಿಂದ ನಡೆದ ಕುಕ್ಕೇಟಿ ತರವಾಡು ಮನೆ ಗೃಹಪ್ರವೇಶ: ಶ್ರೀ ವಿಷ್ಣುಮೂರ್ತಿ, ಧರ್ಮದೈವ,ನಾಗದೇವರು, ಮುನಿಸ್ವಾಮಿ, ಉಪದೈವಗಳ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ.

ವೈಭವದಿಂದ ನಡೆದ ಕುಕ್ಕೇಟಿ ತರವಾಡು ಮನೆ ಗೃಹಪ್ರವೇಶ: ಶ್ರೀ ವಿಷ್ಣುಮೂರ್ತಿ, ಧರ್ಮದೈವ,ನಾಗದೇವರು, ಮುನಿಸ್ವಾಮಿ, ಉಪದೈವಗಳ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ.

ಸುಳ್ಯ ತಾಲೋಕಿನ ಮಂಡೆಕೋಲು ಗ್ರಾಮದ ಗೌಡ ಮನೆತನದ ಕುಕ್ಕೇಟಿ ಕುಟುಂಭಸ್ಥರು ನೂತನವಾಗಿ ನಿರ್ಮಿಸಿದ ತರವಾಡು ಮನೆಯ ಗೃಹಪ್ರವೇಶ ಮತ್ತು ಕಟುಂಬದ ದೈವಶಕ್ತಿಯ ಶ್ರೀ ವಿಷ್ಣುಮೂರ್ತಿ,ಧರ್ಮದೈವ, ನಾಗದೇವರು, ಮುನಿಸ್ವಾಮಿ ಹಾಗೂ ಉಪದೈವಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಜೂನ್ 1 ರಂದು ಭಾರೀ ವಿಜ್ರಂಭಣೆಯಿಂದ ವಿವಿಧ ತಾಂತ್ರಿಕ


ಹಾಗೂ ವೈದಿಕ ವಿಧಿ ವಿಧಾನಗಳೊಂದಿಗೆ ಬ್ರಹ್ಮಶ್ರೀ ವೇ. ಮೂ. ಕುಂಟಾರು ವಾಸುದೇವ ತಂತ್ರಿಗಳು ಹಾಗೂ ಬ್ರಹ್ಮಶ್ರೀ ವೇ.ಮೂ. ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಜೂ.1ರಂದು ಬೆಳಿಗ್ಗೆ 5 ಗಂಟೆಯಿಂದ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದು ಬೆಳಿಗ್ಗೆ 7.33ರಿಂದ 8.30ರ ಮಧ್ಯೆಯ ಮಿಥುನ ಲಗ್ನದಲ್ಲಿ ತರವಾಡು ಮನೆಯ ಗೃಹಪ್ರವೇಶ, ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಹಾಗೂ ನಿತ್ಯನೈಮಿತ್ಯಾದಿಗಳ ನಿರ್ಣಯ ನಡೆಯಿತು.ಬೆಳಿಗ್ಗೆ 11:30 ರಿಂದ ಶ್ರೀ ವೆಂಕಟರಮಣ ದೇವರ ಹರಿಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಮೇ. 31ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಪುಣ್ಯಾಹವಾಚನ, ಸುದರ್ಶನ ಹೋಮ, ಭೂವರಾಹ ಹೋಮ, ಪ್ರೇತಾವಾಹನೆ, ಬಾಧಾಮೂರ್ತಿಗಳ ಆವಾಹನೆ, ಉಚ್ಛಾಟನೆ, ಉಚ್ಛಾಟನೆ ಬಲಿ, ಸ್ಥಳ ಶುದ್ದಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ವಾಸ್ತು ಪುಣ್ಯಹಾಂತ ಕಾರ್ಯಕ್ರಮಗಳು ನಡೆಯಿತು.ಕುಕ್ಕೆಟ್ಟಿ ಕುಟುಂಭಸ್ಥರಲ್ಲದೆ ಊರ ಹಾಗೂ ಪರವೂರ ಬಂದುಮಿತ್ರರು ಭಾಗವಹಿಸಿದ್ದರು.

ರಾಜ್ಯ