
ಕಾರ್ಕಳ : ನಂದಳಿಕೆ ಗ್ರಾಮದ ಕಕ್ಕೆಪದವು
ಸಮೀಪ ಬಾವಿಯೊಳಗೆ ಬಿದ್ದ ಬೆಕ್ಕನ್ನು
ರಕ್ಷಿಸಲು ಹೋಗಿ ಬಾವಿಯೊಳಗೆ ಬಿದ್ದ
ವ್ಯಕ್ತಿಯನ್ನು ರಕ್ಷಿಸಿರುವ ಘಟನೆ ನಡೆದಿದೆ.
ನಂದಳಿಕೆ ಗ್ರಾಮ ಪಂಚಾಯತ್ ನ ಎದರು
ಭಾಗದ ಆವರಣ ವಿರುವ ಬಾವಿಗೆ ಸುಮಾರು
60 ವರ್ಷ ಪ್ರಾಯದ ಬೋಜ ಎಂಬವರು
ಆಕಸ್ಮಿಕವಾಗಿ ಬಾವಿಗೆ ಬಿದ್ದಿರುವ ಬೆಕ್ಕನ್ನು
ರಕ್ಷಿಸಲು ಹೋಗಿ ಬಾವಿಗೆ ಬಿದ್ದಿದ್ದಾರೆ.
ಇನ್ನು ಮಾಹಿತಿ ಪಡೆದ ಕೂಡಲೇ ಅಗ್ನಿಶಾಮಕ
ದಳ ಸ್ಥಳಕ್ಕೆ ದೌಡಾಯಿಸಿದ್ದು, ಬಾವಿಗೆ ಬಿದ್ದಿದ್ದ
ವ್ಯಕ್ತಿಯನ್ನು ಬಾವಿಯಿಂದ ಮೇಲೆಕ್ಕೆ ಎತ್ತಿ
ಪ್ರಾಣ ರಕ್ಷಣೆ ಮಾಡಿರುತ್ತಾರೆ.ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್,ದಾಫೆದರ್ ರೂಪೇಶ್, ಸಿಬ್ಬಂದಿಗಳಾದ
ಚಂದ್ರಶೇಖರ್, ಕೇಶವ್, ನಿತ್ಯಾನಂದ,ಸಂಜಯ್ ಪಾಲ್ಗೊಂಡಿದ್ದರು.

