ಹೆಜಮಾಡಿ ಕೋಡಿ ಬಂದರಿನಿಂದ ಕಬ್ಬಿಣದ ಸೊತ್ತು ಕಳವು – ಐವರು ಅರೆಸ್ಟ್.

ಹೆಜಮಾಡಿ ಕೋಡಿ ಬಂದರಿನಿಂದ ಕಬ್ಬಿಣದ ಸೊತ್ತು ಕಳವು – ಐವರು ಅರೆಸ್ಟ್.

ಪಡುಬಿದ್ರಿ : ಹೆಜಮಾಡಿ ಕೋಡಿ ಬಂದರು ಪ್ರದೇಶದಲ್ಲಿದ್ದ ಕಬ್ಬಿಣದ ಶೀಟ್ ಮತ್ತು ರಾಡ್ ಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪಡುಬಿದ್ರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 21 ಲಕ್ಷ ರೂಪಾಯಿ ಮೊತ್ತದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.


ಬಂಧಿತರನ್ನು ಬೆಳ್ತಂಗಡಿ ನಿವಾಸಿಗಳಾದ ಮೊಹಮ್ಮದ್‌ ಹಸೀಬ್‌, ನಿಜಾಮುದ್ದೀನ್‌, ಮೊಹಮ್ಮದ್‌ ಹಫೀಜ್‌, ಮೊಹಮ್ಮದ್‌ ಆಶಿರ್‌ ಕೆ. ಮತ್ತು ಕಬ್ಬಿದ ಸೊತ್ತುಗಳನ್ನು ಖರೀದಿಸಿದ ಹಂಝಾ ಬೆಳ್ತಂಗಡಿ ಎಂದು ಗುರುತಿಸಲಾಗಿದೆ.
ಕಳೆದ ತಿಂಗಳು ಹೆಜಮಾಡಿ ಕೋಡಿ ಬಂದರು ಪ್ರದೇಶದಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 18,00,078 ರೂಪಾಯಿ ಮೌಲ್ಯದ ಕಬ್ಬಿಣದ ಶೀಟುಗಳನ್ನು ಮತ್ತು ರಾಡ್‌ಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಅಕ್ಟೋಬರ್ 3ರಂದು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರಾಜ್ಯ