ಪುತ್ತೂರು ನಗರ, ಕಬಕ ಪೇಟೆ,ವಿಟ್ಲ ಪೇಟೆಯಲ್ಲಿ ಜೆಡಿಎಸ್ ಪಕ್ಷದಿಂದ ಭರ್ಜರಿ ಮತ ಯಾಚನೆ

ಪುತ್ತೂರು ನಗರ, ಕಬಕ ಪೇಟೆ,ವಿಟ್ಲ ಪೇಟೆಯಲ್ಲಿ ಜೆಡಿಎಸ್ ಪಕ್ಷದಿಂದ ಭರ್ಜರಿ ಮತ ಯಾಚನೆ

ಪುತ್ತೂರು: ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾರವರು ಇಂದು ಪುತ್ತುರೂ ನಗರ, ಕಬಕ ಪೇಟೆ, ಕಂಬಳಬೆಟ್ಟು, ಮೇಗಿನ ಪೇಟೆ,ವಿಟ್ಲ ಪೇಟೆ , ಅಳಿಕೆ ಹಾಗೂ ಮುಂತಾದೆಡೆ ಕಾರ್ಯಕರ್ತರೊಂದಿಗೆ ಭರ್ಜರಿ ಮತ ಪ್ರಚಾರ ನಡೆಸಿದರು. ಪುತ್ತೂರು ತಾಲೂಕು ಜಿಲ್ಲಾ ಕೇಂದ್ರವಾಗಬೇಕು , ಪುತ್ತೂರಿನಲ್ಲಿ ಸರಿಯಾದ ಜಿಲ್ಲಾ ಆಸ್ಪತ್ರೆ ಇಲ್ಲ ಮೂಲಭೂತ ಸೌಕರ್ಯಗಳು ಇಲ್ಲ. ಪುತ್ತೂರಿನಲ್ಲಿ ಸರಕಾರಿ ಸ್ಪೋರ್ಟ್ಸ್ ಅಕಾಡೆಮಿ ನಿರ್ಮಾಣವಾಗಬೇಕು ಇದರಿಂದಾಗಿ ಪುತ್ತೂರಿನ ಹಳ್ಳಿ ಹಳ್ಳಿಗಳಲ್ಲಿ ಇರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.ಪುತ್ತೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ಗೆ ಜಾಗ ಮಂಜೂರಾಗಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ 10 ವರ್ಷದಿಂದ ಹೇಳುತ್ತಿದೆ ಹೊರತು ಕೆಲಸ ಪ್ರಾರಂಭ ಮಾಡಿಲ್ಲ ಇದನ್ನೆಲ್ಲ ಬಿಟ್ಟು ಕಾಂಗ್ರೆಸ್ ಹಾಗೂ ಬಿಜೆಪಿ ಗ್ಯಾರಂಟಿ ,ಉಚಿತ ಎಂದು ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ ಈ ಉಚಿತ, ಗ್ಯಾರಂಟಿಗಳನ್ನು ನೀಡುವ ಬದಲು ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸಲು ಪ್ರಯತ್ನ ಪಡಿ ಎಂದರು. ರಾಜ್ಯದಲ್ಲಿ ಕುಮಾರ ಪರ್ವ ಆರಂಭವಾಗಿದೆ ಈ ಬಾರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗುವುದು ಪಕ್ಕ. ಕುಮಾರಸ್ವಾಮಿಯವರು ನೀಡಿರುವ ಪಂಚರತ್ನ ಯೋಜನೆಯು ಯಾವುದೇ ಧರ್ಮಕ್ಕೆ,ಜಾತಿಗೆ, ವರ್ಗಕ್ಕೆ ಸೀಮಿತವಾಗಿಲ್ಲ ಎಲ್ಲಾ ವರ್ಗದ ಜನರಿಗೆ ಬೇಕಾಗಿರುವ ಯೋಜನೆಗಳು ಈ ಪಂಚರತ್ನ ಯೋಜನೆಯಲ್ಲಿ ಒಳಗೊಂಡಿದೆ.

ಹಾಗಾಗಿ ಈ ಬಾರಿ ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಬಂದಿರುವ ಜೆಡಿಎಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತವನ್ನ ನೀಡಿ ಗೆಲ್ಲಿಸಿಕೊಟ್ಟಲ್ಲಿ ಪುತ್ತೂರಿನ ಅಭಿವೃದ್ಧಿಯ ಚಿತ್ರಣವೇ ಬದಲಾಗುವಂತೆ ಮಾಡುತ್ತೇನೆ ಎಂಬ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷರು ಅಶ್ರಫ್ ಕಲ್ಲೇಗ , ಐ ಸಿ ಕೈಲಾಶ್ ಗೌಡ, ಗಧಾದರ್ ಮಲಾರ್, ರಾಜ್ಯ ಜೆಡಿಎಸ್ ವಕ್ತಾರೆ ಶ್ರೀಮತಿ ಜೋಹರ ನಿಸಾರ್ ಅಹ್ಮದ್,ರಫೀಕ್ ಮನಿಯಾರ್, ಜಲೀಲ್ ಕೊಯಿಲ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ