ವಿಟ್ಲ: ಕಾಲು ಜಾರಿ ಚರಂಡಿಗೆ ಬಿದ್ದು ವ್ಯಕ್ತಿ ಸಾವು.

ವಿಟ್ಲ: ಕಾಲು ಜಾರಿ ಚರಂಡಿಗೆ ಬಿದ್ದು ವ್ಯಕ್ತಿ ಸಾವು.

ವಿಟ್ಲ: ಕಾಲು ಸಂಕ ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ನಡೆದಿದೆ.‌

ಪುಣಚ ಗ್ರಾಮದ ಮಾಯಿಲ ಮೂಲೆ ನಿವಾಸಿ ಕೇಶವ ನಾಯ್ಕ ಎಂ ಮೃತಪಟ್ಟವರು.‌

ಕೇಶವ ನಾಯ್ಕ ಅವರು ಪುಣಚ ಗ್ರಾಮದ ಪರಿಯಾಲ್ತಡ್ಕದಲ್ಲಿರುವ ತನ್ನ ಬಾಡಿಗೆ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮನೆಯ ಬಳಿಯಿರುವ ನೀರು ಹರಿಯುವ ಚರಂಡಿಗೆ ಹಾಕಿರುವ ಕಾಲುಸಂಕವನ್ನು ದಾಟುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಕವುಚಿ ಬಿದ್ದು ಮೇಲೆ ಏಳಲು ಆಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ರಾಜ್ಯ