
ಮಂಗಳೂರು: ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಹೆಚ್.ಎಂ.ನಂದಕುಮಾರ್ ಅವರಿಗೆ ಕಾಂಗ್ರೆಸ್ ಬಿ ಪಾರ್ಮ್ ನೀಡಬೇಕು ಎಂದು ನಂದಕುಮಾರ್ ಬೆಂಬಲಿಗ ಕಾಂಗ್ರೆಸ್ ಮುಖಂಡರು ಆಗ್ರಹ ಮಾಡುತ್ತಿದ್ದು ಇದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಎ.9ರಂದು ನಿಂತಿಕಲ್ಲು ಧರ್ಮಶ್ರೀ ಆರ್ಕೆಡ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಂದಕುಮಾರ್ ಅಭಿಮಾನಿ ಕಾಂಗ್ರೇಸಿಗರು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿ ನಡೆಸಿದ್ದಾರೆ ಕಾಂಗ್ರೇಸ್ ಕಡಬ ಬ್ಲಾಕ್ ಮಾಜಿ ಅದ್ಯಕ್ಷ ಬಾಲಕೃಷ್ಣ ಬಳ್ಳೇರಿ ಮಾತನಾಡಿ ಸುಮಾರು ನಾಲ್ಕು ವರ್ಷದಿಂದ ಸುಳ್ಯ ಕ್ಷೇತ್ರದಲ್ಲಿ ಕಡಬ ಬ್ಲಾಕ್ ಸಂಯೋಜಕರಾಗಿ ನೇಮಿಸಲ್ಪಟ್ಟ ಹೆಚ್.ಎಮ್. ನಂದಕುಮಾರ್‌ರವರು ಕ್ಷೇತ್ರದಾದ್ಯಂತ ನಿರಂತರವಾಗಿ ಸಂಚರಿಸಿ ಪಕ್ಷ ಸಂಘಟನೆಯನ್ನು ಮಾಡಿದವರು, ರಾಜ್ಯ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಅಪೇಕ್ಷೆಯಂತೆ ಕ್ಷೇತ್ರದ ಮತದಾರರ ಮನ ಗೆದ್ದವರು. ಬಡವರಿಗೆ ಮನೆ ಕಟ್ಟಲು ಸಹಕಾರ, ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ, ಧಾರ್ಮಿಕ ಕೇಂದ್ರಗಳಿಗೆ ಆರ್ಥಿಕ ಸೇವೆ, ಕೊರೋನಾ ಕಾಲದಲ್ಲಿ ಆಶಾ ಕಾರ್ಯಕರ್ತರಿಗೆ, ಬಡವರಿಗೆ ಗೃಹರಕ್ಷಕ ದಳದವರಿಗೆ ಆಹಾರ ಕಿಟ್ಟುಗಳನ್ನು ವಿತರಿಸಿ ತೃಪ್ತಿ ಪಟ್ಟವರು. ಕ್ರೀಡಾ ಕ್ಷೇತ್ರದಲ್ಲಿ ಯುವಕರ ಕಣ್ಮಣಿಯಾಗಿ ಮೂಡಿಬಂದು ನಂದಕುಮಾರ್ ರವರು
ಚಟುವಟಿಕೆಯವರಿಗೆ ಪ್ರಾಯೋಜಕರಾಗಿ ಪ್ರೋತ್ಸಾಹಿಸಿ ಸುಳ್ಯದ ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ತುಂಬಿದವರು. ಕಳೆದ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯರಿಗೆ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸಿದವರು, ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ಸುಮಾರು ವರ್ಷಗಳಿಂದ ಬಾಕಿ ಉಳಿದಿದ್ದ ಹಲವಾರು ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೇ ತಮ್ಮ ಸ್ವಂತ
ಖರ್ಚಿನಿಂದ ಕಾರ್ಯಕರ್ತರ ಅಪೇಕ್ಷೆಯಂತೆ ಕೆಲವೊಂದು ಕೆಲಸ ಕಾರ್ಯಗಳನ್ನು ನಡೆಸಿ ಸ್ಥಳೀಯ
ಕಾರ್ಯಕರ್ತರಿಗೆ ಬೆಂಬಲವಾಗಿ ನಿಂತವರು, ಶಾಂತ ಸ್ವಭಾವದ ಸ್ನೇಹ ಜೀವಿ ಹೆಚ್ ಎಂ ನಂದಕುಮಾರ್
ರವರು ಅಪಾರ ಅಭಿಮಾನಿ ಬಳಗವನ್ನು ಹೊಂದಿರುವರು. ಆದುದರಿಂದ ಸಲದ ಕಾಂಗ್ರೆಸ್
ಅಭ್ಯರ್ಥಿಯೆಂದೇ ಬಿಂಬಿಸಲ್ಪಟ್ಟವರು. ಆದರೆ ಈಗ ಕಾಂಗ್ರೆಸ್ ಹೈಕಮಾಂಡ್ ಬೇರೆಯವರನ್ನು ಸಾಂಭಾವ್ಯ
ಅಭ್ಯರ್ಥಿಯೆಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದರಿಂದ ನಂದಕುಮಾರ ಅಭಿಮಾನಿ
ಕಾಂಗ್ರೆಸ್ ಕಾರ್ಯಕರ್ತರು ಆಘಾತಕ್ಕೊಳಗಗಾಗಿದ್ದಾರೆ.
ಕಾರ್ಯಕರ್ತರಾದ ನಾವು ಸುಳ್ಯ ಮತ್ತು ಕಡಬದಲ್ಲಿ ತುರ್ತು ಸಭೆ ಸೇರಿ ನಂತರ ಜಿಲ್ಲಾ ಕಾಂಗ್ರೆಸ್
ಕಚೇರಿಗೆ 800ಕ್ಕೂ ಅಧಿಕ ಕಾರ್ಯಕರ್ತರು ತೆರಳಿ ಜಿಲ್ಲಾಧ್ಯಕ್ಷರಿಗೆ ಮನವಿ ಮಾಡಿ ಬದಲಾವಣೆಗೆ
ಆಗ್ರಹಿದ್ದೇವೆ. ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ದೃಷ್ಟಿಯಲ್ಲಿ ನಿಯೋಜಿತ ಅಭ್ಯರ್ಥಿಯಬದಲಾವಣೆ ಅನಿವಾರ್ಯವಾಗಿದೆ. ನಮ್ಮ ಅಪೇಕ್ಷೆಯು ಪಕ್ಷದ ವಿರುದ್ಧ ಅಲ್ಲ. ಇದರ ಬಗ್ಗೆ ಬ್ಲಾಕ್ ಸಮಿತಿ ಜಿಲ್ಲಾ ಸಮಿತಿ ಹಾಗೂ ರಾಜ್ಯ, ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇವೆ. ಈ ವಿಚಾರವನ್ನು ಕಾಂಗ್ರೆಸ್
ಪಕ್ಷದ ವರಿಷ್ಠರಿಗೆ ಜಿಲ್ಲಾ ನಾಯಕರುಗಳಿಗೆ ಹಾಗೂ ರಾಷ್ಟ್ರ ನಾಯಕರುಗಳಿಗೆ ಮತ್ತಷ್ಟೂ ಮನವರಿಕೆ ಮಾಡಿ
ಕೊಡಲು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿ ಏಪ್ರಿಲ್ 9ರಂದು ಬ್ರಹತ್
ಸಮಾವೇಶವನ್ನು ನಡೆಸಲು ತೀರ್ಮಾನಿಸಿರುತ್ತೇವೆ.
ಈ ಸಮಾವೇಶವು, ಕಳೆದ 30 ವರ್ಷಗಳಿಂದ ಬಿಜೆಪಿಯ ಕೈಯಲ್ಲಿ ಅಭಿವೃದ್ಧಿ ವಂಚಿತವಾಗಿದ್ದ ಸುಳ್ಯ
ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಸಂಚಲನವನ್ನು ಮೂಡಿಸಿರುವ ಗೆಲ್ಲುವ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ನಂದಕುಮಾರ್ ರವರಿಗೆ ಬಿ ಫಾರಂ ಕೊಟ್ಟು ನಮ್ಮ ಪಕ್ಷದ ಅಭ್ಯರ್ಥಿಯಾಗಿ ಗೋಷಿಸಬೇಕು ಮತ್ತು
ಶಾಸಕರನ್ನಾಗಿ ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಮುನ್ನುಡಿ ಬರೆಯಬೇಕೆಂದು ಪಕ್ಷದ ವರಿಷ್ಠರಿಗೆ
ವಿನಂತಿಸಿಕೊಳ್ಳುವ ಸಮಾವೇಶವಾಗಿದೆ. ಇದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ
ಸಮಾವೇಶವಾಗಿದ್ದು, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂದು ಒತ್ತಾಯಿಸುವ ಕಾರ್ಯಕ್ರಮವಾಗಿದೆ.
ನಮ್ಮ ಈ ಸಮಾವೇಶವೂ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಹೊರತು ಪಕ್ಷ ವಿರೋಧಿ ಚಟುವಟಿಕೆ ಅಲ್ಲ ಎಂದು ಹೇಳಿದ್ದಾರೆ.



ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪ್ರವೀಣ್ ಕುಮಾರ್ ಕೆಂಜಿಗುತ್ತು, ಗಣೇಶ್ ಕೈಕುರೆ, ಫೈಝಲ್ ಕಡಬ,ಆನಿಲ್ ರೈ ಚಾವಡಿಬಾಗಿಲು, ಸಚಿನ್ ರಾಜ್ ಶೆಟ್ಟಿ ಪೆರುವಾಜೆ,ಕೆ.ಗೋಕುಲ್ ದಾಸ್,ಸತ್ಯಕುಮಾರ್ ಆಡಿಂಜ, ಭವಾನಿಶಂಕರ ಕಲ್ಮಡ್ಕ, ಜಗನ್ನಾಥ ಪೂಜಾರಿ, ಶಶಿಧರ ಎಂ.ಜೆ, ಕಂದಸ್ವಾಮಿ, ಹಮೀದ್ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.