
ಇತ್ತೀಚೆಗೆ ನಮ್ಮನ್ನಗಲಿದ ಅಲೆಟ್ಟಿ ಮಂಡಲ ಪಂಚಾಯತ್ ಮಾಜಿ ಸದಸ್ಯ, ಅಲೆಟ್ಟಿ ಸಹಕಾರಿ ಸಂಘದಮಾಜಿ ನಿರ್ದೇಶಕ, ಹಿರಿಯ ನಾಗರಿಕ ಕ್ರೀಡಾಪಟು,ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಭೂತಕಲ್ಲು ಸೀತಾರಾಮ ಗೌಡರಿಗೆ ಮತ್ತು ಇತ್ತೀಚೆಗೆ ನಿಧನ ಹೊಂದಿದ ಅಲೆಟ್ಟಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸುಂದರಿ ಯವರ ಪತಿ ದಿ. ಅಂಗಾರ ಇವರುಗಳಿಗೆ ನುಡಿ ನಮನ ಸಲ್ಲಿಸುವ ಶ್ರದ್ದಾಂಜಲಿ ಸಭೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜರಗಿತು
ನುಡಿನಮನ ಸಲ್ಲಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾo ಮಾತನಾಡಿ ನಾಡಿನ ಹಿರಿಯ ಚೇತನ ಬೂತಕಲ್ಲು ಸೀತಾರಾಮ ಗೌಡರು ಕೃಷಿಕರಾಗಿ, ಸಮಾಜ ಸೇವಕರಾಗಿ ಸಲ್ಲಿಸಿದ ಸೇವೆ ಇಂದಿನ ಯುವಜನರಿಗೆ ಮಾದರಿಯಾಗಿದೆ ಎಂದರು,
ಈ ಸಂದರ್ಭದಲ್ಲಿ ಹಾಜರಿದ್ದ ಪಕ್ಷದ ಮುಖoಡರುಗಳು ಪುಷ್ಪನಮನ ಸಲ್ಲಿಸಿದರು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ,
ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ್,ಜಿ. ಪo. ಮಾಜಿ ಸದಸ್ಯ ದೇವಪ್ಪ ನಾಯ್ಕ್, ಅಲೆಟ್ಟಿ ಮಂಡಲ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಸ್. ಎಂ. ಬಾಪು ಸಾಹೇಬ್,ಅಲೆಟ್ಟಿ ಗ್ರಾಮಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಗೀತಾ ಕೊಲ್ಚ್ಚಾರ್, ಧರ್ಮಪಾಲ ಕೊಯಿಂಗಾಜೆ, ಸತ್ಯಕುಮಾರ್ ಆಡಿoಜೆ, ಮುತ್ತಪ್ಪಪೂಜಾರಿ,ಮೀನಾಕ್ಷಿ ಕುಡೆಕಲ್ಲು,ಮಾಜಿ ಸದಸ್ಯೆ ಜಯಂತಿ, ನಗರಕಾಂಗ್ರೆಸ್ ಅಧ್ಯಕ್ಷ ದಿನೇಶ್ ಅಂಬೆಕಲ್ಲು, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಅಮೈ, ಆಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಚಂದ್ರಲಿಂಗo, ಬಾಲಕೃಷ್ಣ ಪೂಜಾರಿ,ಮೃತರ ಪುತ್ರ ಸೋಮಶೇಖರ್, ಗಣೇಶ್ ನಾಗಪಟ್ಟಣ ವಿಜಯಕುಮಾರ್ ಅಲೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು


