
ಉಡುಪಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ೭ ಕೋಟಿ ರೂ ವಂಚಿಸಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ವಿರುದ್ದ ಮತ್ತೊಂದು ವಂಚನಾ ಕೇಸು ದಾಖಲಾಗಿದೆ…! , ಉಡುಪಿ ಬ್ರಹ್ಮಾವರ ಸಮೀಪದ ಸುದೀನ ಎನ್ನುವವರು ಈ ಬಗ್ಗೆ ದೂರು ನೀಡಿದ್ದು ,೨೦೧೮ ರಲ್ಲಿ ಬಟ್ಟೆ ಅಂಗಡಿ ಮಾಡಿ ಕೊಡುತ್ತೇನೆ ಎಂದು ನಂಬಿಸಿ ೫ ಲಕ್ಷ ರೂ ಹಣ ಪಡೆದು ವಂಚನೆ ಮಾಡಿರುವುದಾಗಿ ಪೋಲಿಸರಿಗೆ ದೂರು ನೀಡಿದ್ದಾರೆ


, ೨೦೧೮ ರಿಂದ ಹಂತ ಹಂತವಾಗಿ ಹಣ ಪಡೆದು ವಂಚಿಸಿದ್ದಾರೆ, ಹಣ ಪಡೆಯುವ ಮೊದಲು ತಾನು ರಾಜಕೀಯ ಪ್ರಮುಖರ ಒಡನಾಟ ವಿದ್ದು ನಿಮಗೆ ಬಟ್ಟೆ ಅಂಗಡಿ ತೆರದು ಕೊಡುವುದಾಗಿ ನಂಬಿಸಿರುವುದಲ್ಲದೆ , ಕೊಟ್ಟ ಹಣ ವಾಪಸ್ ಕೇಳಿದಾಗ , ದೂರುದಾರರ ಮೇಲೆ ಅತ್ಯಾಚಾರದ ಕೇಸು ದಾಖಲು ಮಾಡುತ್ತೇನೆ ಎಂದು ಬೆದರಿಸಿದ್ದಲ್ಲದೆ, ಗೂಂಡಾಗಳ ಕೈಯಲ್ಲಿ ಹಲ್ಲೆ ನಡೆಸುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ, ಒಟ್ಟಿನಲ್ಲಿ ಇದೀಗ ಚೈತ್ರಾ ಕುಂದಾಪುರ ವಿರುದ್ದ ಮತ್ತೆ ಮತ್ತೆ ವಂಚನಾ ದೂರು ದಾಖಲಾಗುತ್ತಿದ್ದು, ವಂಚನಾ ಜಾಲ ಇನ್ನಷ್ಟು ತೆರೆದು ಕೊಳ್ಳುತ್ತಿದೆ.