
ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ವಿಶ್ವ ಹಿಂದೂ ಪರಿಷದ್, ಬಜರಂಗದಳ, ದುರ್ಗಾವಾಹಿನಿ, ಮಾತೃಶಕ್ತಿ ಸುಳ್ಯ ಪ್ರಖಂಡ, ರಕ್ತನಿಧಿ ಘಟಕ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು, ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಸುಳ್ಯ ಸರ್ಕಾರಿ ಆಸ್ಪತ್ರೆ ಸುಳ್ಯ ದ.ಕ. ಇದರ ಸಹಯೋಗದಲ್ಲಿ ಸುಳ್ಯ ಸರ್ಕಾರಿ ಆಸತ್ರೆ ಇಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ನಡೆಸಿದ್ದು, ಈ ಕಾರ್ಯಕ್ರಮದಲ್ಲಿ ಸುಳ್ಯದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪಿಸುವಂತೆ ಸಚಿವ ಅಂಗಾರರಿಗೆ ಮನವಿ ಮಾಡಲಾಯಿತುಸುಳ್ಯ ಸರ್ಕಾರಿ ಆಸ್ಪತ್ರೆಯ ಹಲವಾರು ಬಡರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದಲ್ಲಿ ಉಚಿತವಾಗಿ ರಕ್ತವನ್ನು ಒದಗಿಸುವ ಯೋಜನೆ ಮತ್ತು ಯೋಚನೆ ನಮ್ಮದಾಗಿದ್ದು, ತಾಲೂಕಿನ ಹಲವಾರು ರಕ್ತದಾನಿಗಳ ಸಹಾಯದಿಂದ ಸುಳ್ಯದ ಸರ್ಕಾರಿ ಆಸ್ಪತ್ರೆ. ಇಲ್ಲಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ
ಮಾಡುವ ಮೂಲಕ ಕಾರ್ಯದೊಂದಿಗೆ ಸಮಾಜವನ್ನು
ಒಗ್ಗೂಡಿಸಿಕೊಂಡು ಆರೋಗ್ಯವಂತ ಸದೃಢ ಸಮಾಜವನ್ನು ನಿರ್ಮಾಣ ಮಾಡುವ ಕಲ್ಪನೆಯನ್ನು ಮುಂದಿಟ್ಟುಕೊಂಡು ಕೆಲಸ ಮಾಡುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದು,ರಕ್ತದಾನ ಮಾಡುವ ಮೂಲಕ ಸೇವಾ ಕಾರ್ಯವನ್ನು ಮುಂದುವರೆಯುವಂತೆ ನೋಡಿಕೊಂಡು ಹೋಗುತ್ತೇವೆ. ಸುಳ್ಯ
ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಸುಸಜ್ಜಿತವಾದ ಬ್ಲಡ್
ಬ್ಯಾಂಕ್‌ನ ಅವಶ್ಯಕತೆ ಇದ್ದು, ತಾವುಗಳು ಅತ್ಯಂತ
ಮುತುವರ್ಜಿ ವಹಿಸಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಬ್ಲಡ್
ಬ್ಯಾಂಕ್ ಘಟಕವನ್ನು ಒದಗಿಸಿಕೊಟ್ಟು ಬಡರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.


