
ಬೆಳ್ತಂಗಡಿ: ರಸ್ತೆಯಲ್ಲಿ ಹೋಗುವಾಗ ಸೈಡ್ ಕೊಡುವ ವಿಚಾರದಲ್ಲಿ ಕಾರು-ಬೈಕ್ ಅಪಘಾತವಾಗಿ ಮಾರಾಮಾರಿ ನಡೆದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಸ್ ನಿಲ್ದಾಣ ಬಳಿ ನಡೆದಿದೆ.
ಬೈಕ್-ಕಾರು ಡಿಕ್ಕಿಯಾಗಿದೆ. ಆದ್ದರಿಂದ ಕಾರಿನಲ್ಲಿದ್ದ ಮೂವರು ಯುವಕರು ಬೈಕ್ ಸವಾರನ ಮೇಲೆ ಯದ್ವಾತದ್ವಾ ಹಲ್ಲೆ ಮಾಡಿದ್ದಾರೆ. ಹೆಲ್ಮೆಟ್ ನಿಂದ ಬೈಕ್ ಸವಾರನ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಯತ್ನಿಸಿದ ಸಾರ್ವಜನಿಕರ ಮೇಲೂ ಯುವಕರಿಂದ ಹಲ್ಲೆ ನಡೆದಿದೆ. ಆಗ ರೊಚ್ಚಿಗೆದ್ದ ಸಾರ್ವಜನಿಕರು ಮೂವರು ಯುವಕರಿಗೆ ಥಳಿಸಿದ್ದಾರೆ.

