
ಖಾಸಗಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೂ ಸೇರಿದಂತೆ ಎಸ್ ಎಸ್ ಎಲ್ ಸಿ ಯಲ್ಲಿ ಅನುತ್ತೀರ್ಣರಾಗಿ ಪೂರಕ ಪರೀಕ್ಷೆ ಬರೆದವರಿಗೆ ಹಾಗೂ ದೈನಂದಿನ ಕೋಚಿಂಗ್ ತರಗತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯ 35 ವಿದ್ಯಾರ್ಥಿಗಳ ಪೈಕಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.80 ಫಲಿತಾಂಶ ದಾಖಲಾಗಿದೆ. ಖಾಸಗಿಯಾಗಿ ಮತ್ತು ಪೂರಕ ಪರೀಕ್ಷೆ ಬರೆದ 15 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಸನ್ ಅಮ್ರಾ ಶಿಹಾಬುದ್ದೀನ್ (417) ಸಂಕೇತ್ ಎಸ್ ಕೆ (338) ಅಂಕ ಗಳಿಸಿದ್ದಾರೆ. ದೈನಂದಿನ ತರಗತಿಗೆ ಹಾಜರಾದ ಎಲ್ಲಾ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಧೃತಿ ಕೆ. ಹೆಚ್ (582) ಆಯಿಷತ್ ಅಸ್ನಾ (577) ನಿಕ್ಷಿತ್ ರೈ (546) ಇಂಚರಾ ರೈ (541) ಯಶಸ್ವಿ ರೈ (534)ಅತೀ ಹೆಚ್ಚು ಅಂಕ ಗಳಿಸಿದ್ದಾರೆ.

