ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಶಾಲಾ ಪ್ರಾರಂಭೋತ್ಸವ.

ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಶಾಲಾ ಪ್ರಾರಂಭೋತ್ಸವ.

ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇಲ್ಲಿಯ ಶಾಲಾ ಪ್ರಾರಂಭೋತ್ಸವವು ದಿನಾಂಕ ಜೂನ್ 1. ರಂದು ನಡೆಯಿತು. ಮುಂಜಾನೆ ಶಾಲಾ ಸಮಯಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರಾದ ಶ್ರೀಯುತ ಎಂ.ಪಿ.ಉಮೇಶ್ ,ಪ್ರಾಂಶುಪಾಲರಾದ ಕುಮಾರಿ ಟಿ.ಎಮ್.ದೇಚಮ್ಮ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಸಂತಸದಿಂದ ಬರಮಾಡಿಕೊಂಡರು.ಆ ಬಳಿಕ ಶಾಲಾ ಅಸೆಂಬ್ಲಿಯನ್ನು ಹಮ್ಮಿಕೊಳ್ಳಲಾಯಿತು.
ಪ್ರಾಂಶುಪಾಲರು ಮಾತನಾಡಿ , ರಜಾ ದಿನಗಳನ್ನು ಸದುಪಯೋಗಿಸಿ ಮರಳಿ ಶಾಲೆಗೆ ಬಂದ ಮಕ್ಕಳಿಗೆ ಶೈಕ್ಷಣಿಕ ಸಾಲಿನ ಕಲಿಕೆಗೆ ಉತ್ತೇಜನ ನೀಡಿ ಹಿತವಚನ ನುಡಿದರು.


ಶಿಕ್ಷಕರು ವರ್ಣರಂಜಿತ ಸ್ವಾಗತ ಬೋರ್ಡ್ ಗಳನ್ನು ರಚಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು ಮತ್ತು ಆಯಾ ತರಗತಿಗಳಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಿದರು..ಶಾಲಾ ಸಂಚಾಲಕರು ಸಿಹಿ ಹಂಚಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

ರಾಜ್ಯ