
2024ರ ಸಂಸದ ಅರುಣ ಪುತ್ತಿಲ ಎಂದು ಅವರ ಅಭಿಮಾನಿಗಳು ಅಭಿಮಾನ ವ್ಯಕ್ತ ಪಡಿಸಿದ್ದು , ಅವರ ಅಭಿಮಾನಿಗಳಿಂದ ಅಭಿಯಾನ ಆರಂಭವಾಗಿದ್ದು ಇದರ ಸೂಚ್ಯವಾಗಿ ಪುತ್ತಿಲರ ಸ್ಟಿಕ್ಕರ್ ಬಿಡುಗಡೆ ಮಾಡಲಾಗಿದೆ.
ಕುಕ್ಕೇ ಸುಬ್ರಹ್ಮಣ್ಯದಲ್ಲಿ ಇಂದು 2024 ನೆ ಸಾಲಿನ ಚುನಾವಣೆಯಲ್ಲಿ ಹಿಂದೂ ಫೈಯರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ “ತುಳುನಾಡಿಗೆ ಪುತ್ತಿಲ” ಸ್ಟಿಕ್ಕರ್ ಅನಾವರಣ ನಡೆಸಿದ್ದಾರೆ, ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು ಜಯಘೋಷದೊಂದಿಗೆ ಪುತ್ತಿಲರಿಗೆ ಬೆಂಬಲ ಸೂಚಿಸಿದರು.



ಇನ್ನು 2024 ನೇ ಚುನಾವಣೆ ಆರಂಭ ವಾಗುವ ಮೊದಲೇ ಅರುಣ್ ಕುಮಾರ್ ಪುತ್ತಿಲರಿಗೆ ಭಾರೀ ಸಂಖ್ಯೆಯಲ್ಲಿ ಯುವಜನತೆಯ ಬೆಂಬಲ ವ್ಯಕ್ತವಾಗುತ್ತಿದ್ದು,ಹಿಂದೂ ಯುವ ಜನತೆಯ ಮನ ಗೆಲ್ಲುವಲ್ಲಿ ಪುತ್ತಿಲರು ಸಫಲವಾಗಿದ್ದಾರೆ . ಪುತ್ತಿಲ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬಹುಪಾಲು ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆಯಾ ಅಥವಾ ಮತ್ತೆ ಪಕ್ಷೇತರವಾಗಿ ಮತ್ತೆ ಸ್ಪರ್ಧೆ ಮಾಡುತ್ತಾರೆಯಾ ಕಾದು ನೋಡಬೇಕಾಗಿದೆ.
