
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅರಮನೆ ಗಯ ಎಂಬಲ್ಲಿ 40 ವರ್ಷಗಳಿಂದ ನಮಗೊಂದು ಸೇತುವೆ ನಿರ್ಮಿಸಿ ಕೊಡಿ ಎಂದು ಶಾಸಕರಾದ ಎಸ್ ಅಂಗಾರವರಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರಮನೆ ಗಯದ 40 ದಲಿತ ಕುಟುಂಬದವರು ಚುನಾವಣೆ ಬಹಿಷ್ಕಾರದ ಬ್ಯಾನರನ್ನು ಅಳವಡಿಸಿದ್ದಾರೆ



.
ದಲಿತ ಕುಟುಂಬದ ನೆರವಿಗೆ ದಾವಿಸಿದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರಪಾ ಟಾಜೆಯವರು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ಸುಮಾರು 40 ದಲಿತ ಕುಟುಂಬಗಳು ವಾಸವಾಗಿದ್ದರೂ ಹಲವು ವರ್ಷಗಳಿಂದ ಈ ಭಾಗದಲ್ಲಿ ಹರಿಯುವ ಹೊಳೆಗೆ ಸೇತುವೆ ನಿರ್ಮಿಸಿ ಕೊಡಿ ಎಂದು ಈ ಭಾಗದ ಶಾಸಕ ಹಾಗೂ ಸಚಿವರಾಗಿರುವ ಎಸ್ ಅಂಗಾರವರಿಗೆ ಮನವಿ ಪತ್ರ ಕೊಟ್ಟು ಮನವಿ ಮಾಡಿದರು ಯಾವುದೇ ಸ್ಪಂದನೆ ಇಲ್ಲ, ದಲಿತರ ಓಟು ಬೇಕು ದಲಿತರ ಮಕ್ಕಳು ಆ ತೂಗು ಸೇತುವೆ ಮೇಲೆ ಶಾಲೆಗೆ ಹೋಗುವ ಸಂದರ್ಭದಲ್ಲಿ ಸ್ವಲ್ಪ ಆಯ ತಪ್ಪಿದರೂ ನದಿಗೆ ಬೀಳುವ ಪರಿಸ್ಥಿತಿ ಇದ್ದರೂ ಇಲ್ಲಿವರೆಗೆ ಶಾಸಕರು ಇಲ್ಲಿ ಬಂದು ನೋಡಿಲ್ಲ ಈ ತೂಗು ಸೇತುವೆಯ ಮೇಲೆ ವೃದ್ಧರು ಓಡಾಡುತ್ತಾರೆ ಸ್ವಲ್ಪ ಆಯ ತಪ್ಪಿದರೂ ನದಿಗೆ ಬೀಳುವ ಪರಿಸ್ಥಿತಿ ಇದ್ದರು ಇದರ ಬಗ್ಗೆ ಯಾವುದಕ್ಕೂ ಕ್ಯಾರೆ ಅನ್ನದ ಶಾಸಕರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ, ಅರಮನೆ ಗಯದ ನಿವಾಸಿಗಳು ಶಾಸಕರಿಗೆ ಕರೆ ಮಾಡಿದಾಗ ಓಟು ಕಳೆದು ಸೇತುವೆ ನಿರ್ಮಿಸಿ ಕೊಡುತ್ತೇನೆ ಎಂದು ಹೇಳಿ ಓಟು ಕಳೆದು ಗೆದ್ದ ನಂತರ ಕರೆ ಮಾಡಿದಾಗ ಶಾಸಕರು ಹೇಳುವುದು ನಿಮ್ಮ ಓಟು ನನಗೆ ಬೇಕಾಗಿಲ್ಲ ಎಂದು ಹೇಳುತ್ತಾರೆ ಎನ್ನುವ ಆರೋಪ ಹೊರಿಸಿದ್ದಾರೆ ಒಬ್ಬ ಉನ್ನತ ಸ್ಥಾನದಲ್ಲಿದ್ದಂತ ಶಾಸಕರು ಈ ರೀತಿಯ ಮಾತನ್ನು ಹೇಳುವುದು ಸರಿಯಲ್ಲ ಯಾವ ಶಾಸಕರು ಕೂಡ ಅವರ ಜೇಬಿನಿಂದ ಕೊಡುವಂತದ್ದಲ್ಲ ಜನರ ಟ್ಯಾಕ್ಸ್ ದುಡ್ಡಲ್ಲಿ ಅನುದಾನ ತರುವಂತದ್ದು ಸುಳ್ಯ ತಾಲೂಕು ಮೀಸಲಾತಿ ಕ್ಷೇತ್ರ ಇದು ಆದರೆ ಇಲ್ಲಿ ದಲಿತರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಮತ್ತು ಇಲ್ಲಿನ ನಿವಾಸಿಗಲು ಶಾಸಕರ ಜೊತೆ ಮಾತನಾಡಿದಾಗ ಆ ಸೇತುವೆಗೆ 60 ಲಕ್ಷ ಅನುದಾನ ಇಟ್ಟಿದ್ದೇನೆ ನಾಳೆ ಜಲ್ಲಿ ಬರುತ್ತದೆ ಸಿಮೆಂಟ್ ಬರುತ್ತದೆ ಕಬ್ಬಿಣ ಬರುತ್ತದೆ ಎಂದು ಭರವಸೆಯನ್ನು ಕೊಟ್ಟ ಶಾಸಕರು ಎಸ್ ಅಂಗಾರವರು ಒಬ್ಬ ದಲಿತ ಶಾಸಕರಾಗಿ ಉನ್ನತ ಸ್ಥಾನದಲ್ಲಿದ್ದು ಈ ರೀತಿಯ ಸುಳ್ಳು ಭರವಸೆಯನ್ನು ಕೊಡುವುದನ್ನು ನಿಲ್ಲಿಸಿ ಆದಷ್ಟು ಬೇಗ ಸೇತುವೆ ನಿರ್ಮಾಣದ ಕಾಮಗಾರಿಯನ್ನು ಶುರು ಮಾಡಿ ಇಲ್ಲದಿದ್ದರೆ ಇಲ್ಲಿಯ ದಲಿತ ನಿವಾಸಿಗಳು ಯಾವುದೇ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದು ಅರಮನೆ ಗಾಯ ಸಾರ್ವಜನಿಕರು ನಿರ್ಧರಿಸಿದ್ದಾರೆ ಈಗಾಗಲೇ ಚುನಾವಣೆ ಬಹಿಷ್ಕಾರದ ಬ್ಯಾನರನ್ನು ಕೂಡ ಅಳವಡಿಸಿದ್ದಾರೆ .

