ಅಕ್ರಮ ಜಾನುವಾರು ಸಾಗಾಟ : ಮೂರು ಪಿಕಪ್ ವಾಹನ ಸಹಿತ 6 ದನ, 2 ಕರು ವಶ.

ಅಕ್ರಮ ಜಾನುವಾರು ಸಾಗಾಟ : ಮೂರು ಪಿಕಪ್ ವಾಹನ ಸಹಿತ 6 ದನ, 2 ಕರು ವಶ.

ಧರ್ಮಸ್ಥಳ: ಪಿಕಪ್ ವಾಹನದಲ್ಲಿ ಅಹಿಂಸಾತ್ಮಕವಾಗಿ ಜಾನುವಾರು ಸಾಗಾಟದ ಪ್ರಕರಣವನ್ನು ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು ಪಿಕಪ್ ನಲ್ಲಿದ್ದ ಜಾನುವಾರು ಸಹಿತ ನಾಲ್ವರನ್ನು ಬಂಧಿಸಿದ ಘಟನೆ ವರದಿಯಾಗಿದೆ.

ಚೆನ್ನಕೇಶವ ಮರವಳಲು ಕಸಬಾ ಹೋಬಳಿ, ಅರಕಲಗೂಡು ಹಾಸನದ ಅರಕಲಗೂಡಿನ ಮರವಳಲು ಕಸಬಾ ಹೋಬಳಿಯ ಚೆನ್ನ ಕೇಶವ, ಬೆಳ್ತಂಗಡಿ ನಾವೂರು ಒಳಗದ್ಡೆಯ ಪುಷ್ಪರಾಜ್ , ಮೋರ್ತಾಜೆ ಮನೆಯ ಪ್ರಮೋದ್ ಸಾಲ್ಯಾನ್, ಹೊಳೆ ನರಸೀಪುರ ಹಳೇಕೋಟೆ ಹೋಬಳಿ ಸಂದೀಪ್ ಹಿರೇಬೆಳಗುಳಿ ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆ ಹಿನ್ನಲೆ

ಧರ್ಮಸ್ಥಳ ಠಾಣೆಯ ಎಸ್.ಐ ಅನೀಲಕುಮಾರ್‌ ಅವರು ಜು.12 ರಂದು ಖಚಿತ ಮಾಹಿತಿಯಂತೆ ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮ ಮಂದಿರದ ಬಳಿ ಸಿಬ್ಬಂದಿರವರುಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದ ಸಮಯ ರಾತ್ರಿ 8.45 ಗಂಟೆಗೆ ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಮೂರು ಪಿಕಪ್ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಅಕ್ರಮವಾಗಿ ಜಾನುವಾರು ಸಾಗಾಟದ ಪ್ರಕರಣ ಬೆಳಕಿಗೆ ಬಂದಿತ್ತು.

ವಾಹನದಲ್ಲಿ 6 ದನ, 2 ಗಂಡು ಕರುಗಳು ಸೇರಿ ಒಟ್ಟು 8 ಜಾನುವಾರುಗಳನ್ನು ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿತ್ತು. ವಾಹನ ಸಹಿತ ಜಾನುವಾರುಗಳನ್ನು ಸ್ವಾಧೀನಪಡಿಸಿಕೊಂಡ ಪೊಲೀಸರು ನಾಲ್ವರು ಆಪಾದಿತರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ