
ಸುಳ್ಯ: ಇತ್ತೀಚೆಗೆ ನಿಧನರಾದ ಅಜ್ಜಾವರ ಗ್ರಾಮದ ಬಿಜೆಪಿ ಮುಖಂಡ ನವೀನ್ ಕುಮಾರ್ ರೈ ಮೇನಾಲ ಹಾಗೂ ಕಾಂಗ್ರೆಸ್ ಮುಖಂಡರಾದ ಸುಧೀರ್ ರೈ ಮೇನಾಲರ ನಿವಾಸಕ್ಕೆ ಇಂದು ಸಂಸದ ನಳೀನ್ ಕುಮಾರ್ ಕಟೀಲ್ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದ್ದಾರೆ. ಮೃತರಾದ ನವೀನ್ ರೈ ರವರ ಪತ್ನಿ ರೂಪ ನವೀನ್ ರೈ ಹಾಗೂ ಮಕ್ಕಳಿಗೆ ಅದೇ ರೀತಿ ಸುಧೀರ್ ರೈ ರವರ ಪತ್ನಿ ದಿವ್ಯ ಸುಧೀರ್ ರೈ ಸಹೋದರಿ ಸುಜಿತಾ ರೈ ರವರಿಗೆ ಸಾಂತ್ವನದ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ , ಸುಭೋದ್ ಶೆಟ್ಟಿ ಮೇನಾಲ , ಎಸ್ ಎನ್ ಮನ್ಮಥ , ಎನ್ ಎ ರಾಮಚಂದ್ರ ,ವಿನಯ ಕುಮಾರ್ ಕಂದಡ್ಕ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತ್ಯವತಿ ಬಸವನಪಾದೆ , ಯಶೋದ ರಾಮಚಂದ್ರ , ಕಿಟ್ಟಣ್ಣ ರೈ ಮೇನಾಲ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.



