ಅಭ್ಯರ್ಥಿಯ ಆಯ್ಕೆಯಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ:ಮೂವರ ಹೆಸರು ಶಿಫಾರಸು ಮಾಡಲಾಗಿತ್ತು: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ.

ಅಭ್ಯರ್ಥಿಯ ಆಯ್ಕೆಯಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ:ಮೂವರ ಹೆಸರು ಶಿಫಾರಸು ಮಾಡಲಾಗಿತ್ತು: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ.

ಕಾಂಗ್ರೆಸ್ ನಲ್ಲಿ ಯಾರೇ ಅಭ್ಯರ್ಥಿಯಾದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ: ಎನ್ .ಜಯಪ್ರಕಾಶ್ ರೈ

ವಾಸ್ತವ ಕಾರ್ಯಕರ್ತರಿಗೆ ಮನದಟ್ಟು ಮಾಡುತ್ತೇವೆ: ಭರತ್ ಮುಂಡೋಡಿ

ಸುಳ್ಯ:ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ, ಸುಳ್ಯದಿಂದ ಅಂತಿಮವಾಗಿ ಕೃಷ್ಣಪ್ಪ ಜಿ, ನಂದಕುಮಾರ್ ಮತ್ತು ಶ್ರೀಮತಿ ಅಪ್ಪಿ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಯಾರನ್ನು ಅಭ್ಯರ್ಥಿ ಎಂದು ಘೋಷಿಸಿದರೂ ಗೆಲ್ಲಿಸಲು ಪ್ರಯತ್ನ ಪಡುವ ತೀರ್ಮಾನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಬಂದಿತ್ತು ಎಂದು ಬ್ಲಾಕ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ.ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ಹಾಗು ಕಡಬ ಬ್ಲಾಕ್‌ಗಳನ್ನೊಳಗೊಂಡ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಜಿ. ಕೃಷ್ಣಪ್ಪ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಹೈಕಮಾಂಡ್ ಪ್ರಕಟಿಸಿರುತ್ತದೆ. ಇದನ್ನು ಸುಳ್ಯ ಕಾಂಗ್ರೆಸ್ ಒಪ್ಪಿಕೊಂಡಿರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸುಳ್ಯ ಬ್ಲಾಕ್ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಸುಳ್ಯದಿಂದ 6 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಮೂರು ಹೆಸರುಗಳನ್ನು ಬ್ಲಾಕ್‌ನಿಂದ ಕಳುಹಿಸಿಕೊಡಬೇಕೆಂದು ಹೈಕಮಾಂಡ್ ತಿಳಿಸಿದ ಮೇರೆಗೆ 3 ಹೆಸರನ್ನು ವೀಕ್ಷಕರಿಗೆ ಕಳುಹಿಸಿ ಕೊಡಲಾಗಿತ್ತು. ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ರೆಹಮಾನ್ ಖಾನ್ ನೇತೃತ್ವದ ವೀಕ್ಷಕರ ತಂಡ ರಾಜ್ಯದಿಂದ ಆಗಮಿಸಿ ಅರ್ಜಿ ಸಲ್ಲಿಸಿದ ಎಲ್ಲಾ ಆಕಾಂಕ್ಷಿಗಳನ್ನು ಕರೆಯಿಸಿ ಇವರಲ್ಲಿ ಅಭಿಪ್ರಾಯ ಸಂಗ್ರಹಿಸಿ ಪಟ್ಟಿಯನ್ನು ರಾಜ್ಯ ಸಮಿತಿಗೆ ರವಾನಿಸಲಾಗಿತ್ತು.ತದನಂತರ ರಾಜ್ಯ ಚುನಾವಣಾ ಸಮಿತಿ, ಸ್ಕ್ರೀನಿಂಗ್ ಕಮಿಟಿ, ಆರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಕೇಂದ್ರ ಚುನಾವಣಾ ಸಮಿತಿಗೆ ಹೆಸರನ್ನು ಕಳುಹಿಸಿ ಅಂತಿಮವಾಗಿ
ಪ್ರಕಟಿಸಿರುತ್ತಾರೆ. ಅಭ್ಯರ್ಥಿ ಆಯ್ಕೆಯ ಅಸಮಾಧಾನ ಕುರಿತು ಈಗಾಗಲೇ ವರಿಷ್ಠರಿಗೆ ಕಾರ್ಯಕರ್ತರು ಅಹವಾಲು ಸಲ್ಲಿಸಿರುತ್ತಾರೆ. ಇದಕ್ಕೆ ಹೈಕಮಾಂಡ್‌ ಸೂಕ್ತ ಪರಿಹಾರ ಕಂಡುಕೊಳ್ಳುತ್ತದೆ ಎಂಬ ವಿಶ್ವಾಸ ನಮ್ಮದು. ಮತ್ತು ಪಕ್ಷದ ಹೈಕಮಾಂಡ್ ನೀಡಿದ ಯಾವುದೇ ಅಭ್ಯರ್ಥಿಯ ಗೆಲುವಿಗೆ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದ್ದಾರೆ. ಜಿ.ಕೃಷ್ಣಪ್ಪ ಸುಳ್ಯ ಬ್ಲಾಕ್‌ನ ಕೆಪಿಸಿಸಿ ಸಂಯೋಜಕರಾಗಿ, ಹೆಚ್ ಎಂ ನಂದಕುಮಾರ್ ಕಡಬ ಬ್ಲಾಕ್‌ನ ಕೆಪಿಸಿಸಿ ಸಂಯೋಜಕರಾಗಿ ಪಕ್ಷ ಸಂಘಟನೆ, ಸಮಾಜಸೇವೆ, ನಾಯಕರ ಕಾರ್ಯಕರ್ತರ ಸಂವಹನದಲ್ಲಿ ಕಳೆದ ಕೆಲವು ವರ್ಷಗಳಿಂದ ತೊಡಗಿಸಿಕೊಂಡಿರುತ್ತಾರೆ. ಇದನ್ನು ಗಮನಿಸಿಯೇ ವೀಕ್ಷಕರ ತಂಡಕ್ಕೆ ಇವರ ಹೆಸರನ್ನು ಶಿಫರಸ್ಸು ಮಾಡಲಾಗಿದೆ ಎಂದು ವಿವರಿಸಿದರು. ಅಸಮಾಧಾನಗೊಂಡ ಎಲ್ಲಾ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಗೊಂದಲವನ್ನು ಪರಿಹರಿಸುತ್ತೇವೆ ಎಂದು ಅವರು ಹೇಳಿದರು.


ಕೆಪಿಸಿಸಿ ದ.ಕ.ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ಮಾತನಾಡಿ ನಂದಕುಮಾರ್ ಅಭಿಮಾನಿಗಳು ಕೃಷ್ಣಪ್ಪ ಅಭಿಮಾನಿಗಳು ಅಂತ ಇಲ್ಲ ಎಲ್ಲರೂ ಕಾಂಗ್ರೇಸ್ ಕಾರ್ಯಕರ್ತರು,ಕೆಲವು ಕಾರ್ಯಕರ್ತರಿಗೆ ನಾವು ಜಿ.ಕೃಷ್ಣಪ್ಪ ಪರವಾಗಿ ಶಿಪಾರಸು ಮಾಡಿದ್ದೇವೆ ಎನ್ನುವ ಅನುಮಾನ ಆದರೆ ಅವರ ಅನುಮಾನ ಸುಳ್ಳು ನಂದಕುಮಾರ್ ಮತ್ತು ಕೃಷ್ಣಪ್ಪ ಇಬ್ಬರು ಉತ್ತಮವಾಗಿ ಪಕ್ಷ ಸಂಘಟನೆ ಮಾಡಿದವರು, ನಾವು ಅಂತಿಮ ವಾಗಿ ಮೂವರ ಹೆಸರು ಕಳಿಸಿದ್ದು ಆಯ್ಕೆಯ ಪ್ರಕ್ರೀಯೆ ಹೈಕಾಮಾಂಡ್ ವತಿಯಿಂದ ಆಗಿದೆ ಕಾರ್ಯಕರ್ತರ ಗೊಂದಲವನ್ನು ಅವರಲ್ಲಿ ಮಾತನಾಡಿ ನಿವಾರಿಸಲಿದ್ದೇವೆ ಎಂದರು.
ಮಾಜಿ ಬ್ಲಾಕ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ ಕಾಂಗ್ರೇಸ್ ನಲ್ಲಿ ಯಾರಿಗೆ ಬಿ ಪಾರಂ ನೀಡಿದರು ನಾವೆಲ್ಲ ಸಂಘಟಿತರಾಗಿ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನ ಪಡುತ್ತೇವೆ ,ಎಲ್ಲಾ ನಾಯಕರು ಒಗ್ಗಟಾಗಿದ್ದೇವೆ, ಎಲ್ಲಾ ಬಿನ್ನಭಿಪ್ರಾಯ ಶೀಘ್ರ ಶಮನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೀಘ್ರದಲ್ಲಿ ಸಂಪಾಜೆಯಲ್ಲಿ ಕಾಂಗ್ರೇಸ್ ಸಮಾವೇಶ.

ಸಂಪಾಜೆಯಲ್ಲಿನ ಪಕ್ಷದ ಆಂತರಿಕ ಗೊಂದಲದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬ್ಲಾಕ್ ಅಧ್ಯಕ್ಷರು
ಸಂಪಾಜೆಯಲ್ಲಿ ಪಕ್ಷದ ಆಂತರಿಕ ಗೊಂದಲ ನಿವಾರಣೆಗೆ ಶೀಘ್ರದಲ್ಲಿ ಸ್ಂಪಾಜೆ ವ್ಯಾಪ್ತಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಈ ಮೂಲಕ ಪಕ್ಷ ಬಲವರ್ಧನೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಕಾಂಗ್ರೆಸ್ ಮುಖಂಡರಾದ ಡಾ.ಬಿ.ರಘು, ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಫ, ಸದಾನಂದ‌ ಮಾವಜಿ, ಇಸ್ಮಾಯಿಲ್ ಪಡ್ಪಿನಂಗಡಿ, ಶಾಫಿ ಕುತ್ತಮೊಟ್ಟೆ,ಹಮೀದ್ ಕುತ್ತಮೊಟ್ಟೆ, ಜಯಪ್ರಕಾಶ್ ನೆಕ್ರಪ್ಪಾಡಿ, ಚಂದ್ರಲಿಂಗಂ, ಸುರೇಶ್ ಅಮೈ, ಶಿವರಾಮ ಅಮೈ ಗಂಗಾಧರ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ