
ಆ.13 ರಂದು ಸುಳ್ಯದ ಕೆ.ವಿ.ಜಿ. ಪುರಭವನದಲ್ಲಿ
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಸುಳ್ಯ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಅಭಿನಂದನಾ ಸಮಾರಂಭ, ಸಾಧಕರಿಗೆ ಸನ್ಮಾನ, ಪದಗ್ರಹಣ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಮತು ಅ.6 ರಂದು ಸುಳ್ಯದ ಜೂನಿಯರ್ ಕಾಲೇಜಿನ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ ಎಂದು ಸಂಘದ
ಅಧ್ಯಕ್ಷ ಮೋನಪ್ಪ ರಾಜಾರಾಮಪುರ ಹಾಗೂ ಗೌರವಾಧ್ಯಕ್ಷ ಕೆ.ಎಂ.ಬಾಬು ಜಾಲ್ಸೂರು ತಿಳಿಸಿದ್ದಾರೆ.ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು
ಕಳೆದ ೧೪ ವರ್ಷದಿಂದ ಸಂಘಟನೆ ಸಕ್ರಿಯವಾಗಿದ್ದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಆದಿದ್ರಾವಿಡ ಸಮಾಜ ಹಲವು ವರ್ಷಗಳಿಂದ ಆಟಿಟೊಂಜಿ ಕಾರ್ಯಕ್ರಮ ನಡೆಸುತ್ತಾ ಬಂದಿದೆ.ಆ.೧೩ರಂದು ಆದಿದ್ರಾವಿಡ ಸಮಾಜ ಸಂಘಟನೆಯ ಹಿರಿಯರಾದ ಮಾಯಿಲಪ್ಪ ಬೂಡುರವರು ಸತ್ಯಸಾರವಾಣಿ ದೈವಗಳಿಗೆ ದೀಪ ಬೆಳಗಿಸಿ ಅಂದು ನಡೆಯುವ ಎಲ್ಲಾ ಸ್ಪರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ, ಪೂ. 11ಕ್ಕೆ ಸಂಘದ ಅಧ್ಯಕ್ಷ ಮೋನಪ್ಪ ರಾಜಾರಾಂಪುರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಸಮಾರಂಭದಲ್ಲಿಸುಳ್ಯ ಕ್ಷೇತ್ರದ ಶಾಸಕಿ ಸಮಾಜದ ನಾಯಕಿ, ಭಾಗೀರಥಿ ಮುರುಳ್ಯ ಅವರನ್ನು ಅಭಿನಂಧಿಸುವ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಳ್‌ಬಾಗ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಲಿದ್ದಾರೆ. ಮಂಗಳೂರು ವಿವಿಯ ಕನ್ನಡ ಉಪನ್ಯಾಸಕ ಡಾ.ಯಶುಕುಮಾರ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖರು, ಸಂಘದ ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಲಿದ್ದಾರೆ.



ಅಲ್ಲದೆ ಶೈಕ್ಷಣಿಕ ಸಾಧಕ ಸಮಾಜದ ಮಕ್ಕಳನ್ನು ಪುರಸ್ಕರಿಸಲಾಗುತ್ತದೆ ಬಳಿಕ ಆಟಿ ತಿಂಗಳ ವಿವಿಧ ಬಗೆಯ ತಿಂಡಿ ತಿನಿಸುಗಳ ಭೋಜನ ಕೂಟ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ ಎಂದು ಅವರು ವಿವರಿಸಿದರು.
ಆ.6 ರಂದು ಸುಳ್ಯದ ಜೂನಿಯರ್ ಕಾಲೇಜಿನ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ರಿಂದ ಸಂಜೆ 6ಗಂಟೆಯವರೆಗೆ ಗ್ರಾಮೀಣ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದ್ದು. ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸಲಿದ್ದಾರೆ ಬಳಿಕ ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಗೌರವ ಸಲಹೆಗಾರ ವಿಜಯ ಆಲಡ್ಕ, ಶಿವಪ್ಪ ಕೋಡ್ತಿಲು, ಚಂದ್ರಶೇಖರ ಐವರ್ನಾಡು, ಚೋಮ ನಾವೂರು, ಕರಿಯಪ್ಪ ಕೋಡ್ತಿಲು ಉಪಸ್ಥಿತರಿದ್ದರು.