ಆ.8 ರಂದು ಸುಳ್ಯದಲ್ಲಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ವಿಶೇಷ ತನಿಖೆಗೆ ವಹಿಸಲು ಆಗ್ರಹಿಸಿ ಸುಳ್ಯದಲ್ಲಿ ಪ್ರತಿಭಟನೆಗೆ ನಿರ್ಧಾರ.

ಆ.8 ರಂದು ಸುಳ್ಯದಲ್ಲಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ವಿಶೇಷ ತನಿಖೆಗೆ ವಹಿಸಲು ಆಗ್ರಹಿಸಿ ಸುಳ್ಯದಲ್ಲಿ ಪ್ರತಿಭಟನೆಗೆ ನಿರ್ಧಾರ.

ಆ.8 ರಂದು ಸುಳ್ಯದಲ್ಲಿ ಹನ್ನೊಂದು ವರುಷಗಳ ಹಿಂದೆ ಬೆಳ್ತಂಗಡಿಯಲ್ಲಿ ಹತ್ಯೆಯಾದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ವಿಶೇಷ ತನಿಖೆಗೆ ವಹಿಸಲು ಆಗ್ರಹಿಸಿ ಸುಳ್ಯದಲ್ಲಿ ನ್ಯಾಯಕ್ಕಾಗಿ, ಹೋರಾಟದ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು,ನಮ್ಮ ಈ ಹೋರಾಟ ಯಾವುದೇ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ದವಲ್ಲ ನ್ಯಾಯಕ್ಕಾಗಿ ಹೋರಾಟ , ಸೌಜನ್ಯ ಎಂಬ ಹೆಣ್ಣು ಮಗಳು ನಮ್ಮ ಸಹೋದರಿ ಅವಳಿಗೆ ನ್ಯಾಯ ಸಿಗಬೇಕು ಎಂದು ಟಿ ಎನ್ ವಸಂತ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ ಅವರು ಅ.5ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು
ಸೌಜನ್ಯಳ ಹತ್ಯೆ ನಡೆದು ಸುಮಾರು 11 ವರ್ಷ ಕಳೆದರೂ ಆರೋಪಿ ಪತ್ತೆಯಾಗಲಿಲ್ಲ. 11 ವರ್ಷದಲ್ಲಿ ನಿರಪರಾಧಿಯಾದ ಮುಗ್ಧನ ಬಂಧನ ಮಾಡಿ ಸೆರೆಯಲ್ಲಿ ಇರಿಸುವುದರ ಮುಖಾಂತರ ನ್ಯಾಯದ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡಿದ್ದಾರೆ. ನಂಬಿಕೆ ಇಟ್ಟಿರುವ ಮೊಲೀಸ್ ಇಲಾಖೆ ಮತ್ತು ವೈದ್ಯಕೀಯ ಇಲಾಖೆ ನ್ಯಾಯದ ಪರ ಕೆಲಸ ಮಾಡಿಲ್ಲ ಪ್ರಜ್ಞಾವಂತ ನಾಗರಿಕ ಬಂಧುಗಳು ಎಚ್ಚೆತ್ತು ಹೋರಾಟಕ್ಕೆ ಮುಂದಿರುವ ಕಾರಣದಿಂದ ನಾವುಗಳು ಒಂದಾಗಿ ‘ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತ ಸೌಜನ್ಯಪರ ಹೋರಾಟಕ್ಕೆ ಮುಂದಾಗಿದ್ದೇವೆ. ಹಲವಾರು ಸಂಘ ಸಂಸ್ಥೆ ಸಹಯೋಗದೊಂದಿಗೆ ಯಾವುದೇ ಧಾರ್ಮಿಕ ಕ್ಷೇತ್ರವನ್ನಾಗಲೀ, ವ್ಯಕ್ತಿಯನ್ನಾಗಲೀ ಕೇಂದ್ರೀಕರಿಸಿ ಮಾಡುವ ಹೋರಾಟ ಇದಲ್ಲ, ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯರ ತಾಯಿಯನ್ನು ಸೇರಿಸಿಕೊಂಡು ಸುಮಾರು 9.00 ಗಂಟೆಗೆ ಮುರುಳ್ಯ ಗ್ರಾಮದ ನಿಂತಿಕಲ್ಲು ಮುಖ್ಯ ಪೇಟೆಯಿಂದ ವಾಹನ ಜಾಥಕ್ಕೆ ಚಾಲನೆ ಕೊಡುವುದರ ಮುಖಾಂತರ ಹೊರಟು ಸರಿ ಸುಮಾರು 500 ಕ್ಕೂ ಮಿಗಿಲಾದ ಬೈಕು ಕಾರುಗಳಲ್ಲಿ ವಾಹನ ಜಾಥದೊಂದಿಗೆ ಹೊರಟು ಸುಳ್ಯದ ಪೈಚಾರಿನಿಂದ ಕಾಲ್ನಡಿಗೆಯ ಜಾಥದ ಮುಖಾಂತರ ಸುಳ್ಯ ನಗರಕ್ಕೆ ಆಗಮಿಸಲಿದೆ, ನ್ಯಾಯಪರ ಹೋರಾಟಗಾರರನ್ನು ಪ್ರದೇಶದಲ್ಲಿ ಸೇರುವ ಯೋಜನೆ ಮತ್ತು ಒಡಗೂಡಿಸಿಕೊಂಡು ಹಳೆ ಬಸ್ ನಿಲ್ದಾಣದಲ್ಲಿ ಸಭೆಯನ್ನು ಉದ್ದೇಶಿಸಿ ಮುಖ್ಯ ಭಾಷಣವನ್ನು ಮಹೇಶ್ ಶೆಟ್ಟಿ ತಿಮರೋಡಿ ಮಾಡಲಿದ್ದಾರೆ ಅಲ್ಲದೆ ಸೌಜನ್ಯಳ ಕುಟುಂಬವು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸುಳ್ಯ ಸೌಜನ್ಯ ಪರ ಹೋರಾಟದ ಸಂಚಾಲಕರಾದ ಎನ್ ಟಿ ವಸಂತ ತಿಳಿಸಿದರು.

ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಕೆಲವೊಂದು ಚಿತ್ರಗಳು ಕಂಡಾಗ ಮತ್ತು ಸೌಜನ್ಯಳ ತಾಯಿ ತನ್ನ ಮಗಳಿಗಾಗಿ ಪರಿತಪಿಸುತ್ತಾ ಇರುವುದು ಕಂಡಾಗ ನನಗೆ ಬಹಳ ಭಯವಾಗುತ್ತಿದೆ ನನ್ನ ಮಕ್ಕಳು ಹೊರಗೆ ಇದ್ದಾರೆ ಒಂದು ಗ್ರಾಮದಲ್ಲೆ ಇಂತಹ ಘಟನೆ ನಡೆದು ಅದನ್ನೆ ಹಿಡಿಯಲು ಆಗದಿದ್ದರೆ ಹೇಗೆ ಎಂದು ಪ್ರಶ್ನಿಸಿದ. ಅವರು ಮೊದಲಿಗೆ ಈ ತನಿಖೆಯಲ್ಲಿ ಲೋಪ ಮಾಡಿರುವ ಅಂದಿನ ತನಿಖಾಧಿಕಾರಿಯನ್ನೇ ತನಿಖೆಗೆ ಒಳಪಡಿಸಬೇಕು, ಅಲ್ಲದೆ ಮುಖ್ಯಮಂತ್ರಿ ವಿಶೇಷ ಮುತುವರ್ಜಿ ವಹಿಸಿ ಎಸ್ ಐ ಟಿ ತಂಡ ರಚಿಸಿ ಅದರ ಮುಖಾಂತರ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಸ್ಟಿಯಲ್ಲಿ ರೈತ ಸಂಘದ ತಾಲೋಕು ಅಧ್ಯಕ್ಷ ಲೋಲಜಾಕ್ಷ ಬೂತಕಲ್ಲು , ಹರೀಶ್ ಕುಮಾರ್ , ವಿಶ್ವನಾಥ , ಜಯಲಕ್ಷ್ಮಿ , ಭರತ್ , ಅಜಿತ್ ಐವರ್ನಾಡು ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ