ರೋಟರಿ ವಿದ್ಯಾಸಂಸ್ಥೆಗಳ ವರ‍್ಷಿಕ ಕ್ರೀಡಾಕೂಟ-ಅದ್ದೂರಿ ಆಚರಣೆ.

ರೋಟರಿ ವಿದ್ಯಾಸಂಸ್ಥೆಗಳ ವರ‍್ಷಿಕ ಕ್ರೀಡಾಕೂಟ-ಅದ್ದೂರಿ ಆಚರಣೆ.

ಸುಳ್ಯ: ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ತಾಲೂಕು ಇದರ ಆಡಳಿತಕ್ಕೆ ಒಳಪಟ್ಟಿರುವ ರೋಟರಿ ಸಂಯುಕ್ತ ಪದವಿ ಪರ‍್ವ ಕಾಲೇಜು, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ವರ‍್ಷಿಕ ಕ್ರೀಡಾಕೂಟವು ನವೆಂಬರ್ ೨೫ರಂದು ಕಾಲೇಜಿನ ಮೈದಾನ ಮಿತ್ತಡ್ಕದಲ್ಲಿ ನಡೆಯಿತು.
ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷರಾಗಿರುವ ರೊಟೇರಿಯನ್ ಮೇಜರ್ ಡೋನರ್ ಡಾ. ರಾಮ್ ಮೋಹನ್ ಅವರ ಸಭಾಧ್ಯಕ್ಷತೆಯಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಅವರು ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಶುಭ ಹಾರೈಸಿದರು.

ಕರ‍್ಯಕ್ರಮವನ್ನು ರಾಜ್ಯ ಮಟ್ಟದ ಕ್ರೀಡಾ ಪ್ರತಿಭೆಗಳಾದ ಕು.ಕ್ಷಮಾ ಮತ್ತು ಬಳಗವು ಅದ್ಧೂರಿ ಪಥಸಂಚಲನದೊಂದಿಗೆ ಕ್ರೀಡಾ ಜ್ಯೋತಿಯನ್ನು ಉದ್ಘಾಟಕರಿಗೆ ಹಸ್ತಾಂತರಿಸಿದರು. ರೋಟರಿ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿರುವ ರೊ.ಎಂ.ಪಿ.ಪಿಹೆಚ್ಎಫ್ ಪ್ರಭಾಕರನ್ ನಾಯರ್ ಅವರು ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ರಾಜ್ಯ ಮಟ್ಟದ ಮ್ಯಾರಥಾನ್ ಅಥ್ಲೆಟ್ ಶ್ರೀ ವಿನಯ್ ನಾರಾಲು ಅವರು ವಿಶೇಷ ಅತಿಥಿಗಳಾಗಿ ಆಗಮಿಸಿ ವಿದ್ಯರ‍್ಥಿಗಳು ಲಭ್ಯವಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರೇರಣಾ ದಾಯಕ ಸಂದೇಶ ನೀಡಿದರು.

ವೇದಿಕೆಯಲ್ಲಿ ಟ್ರಸ್ಟಿ ರೊ.ಮಧುಸೂದನ್, ನಿಯೋಜಿತ ಅಧ್ಯಕ್ಷೆ ರೊ.ಲತಾಮಧುಸೂದನ್, ರೊ.ಪ್ರಭಾಕರನ್ ಸಿ.ಹೆಚ್, ರೊ.ಭಾಸ್ಕರ್ ನಾಯರ್, ರೊ.ವಸಂತ್ ಎ.ಸಿ, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತ್ಸ್ನಾ.ಕೆ ಮತ್ತು ಪೋಷಕರ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಮತಿ ಬಿಂದು ಸ್ವಾಗತಿಸಿ, ಕಾಲೇಜಿನ ವಿದ್ಯರ‍್ಥಿನಿಗಳಾದ ಭಾನವಿ, ಯಶಸ್ವಿ,ಅವನಿ ಅವರು ಪ್ರರ‍್ಥಿಸಿದರು.ಶಿಕ್ಷಕಿ ಶ್ರೀಮತಿ ಶೋಭಾ ಅವರು ವಂದಿಸಿದರು.

ಮುಂಜಾನೆಯಿಂದ ಸಂಜೆಯವರೆಗೆ ನಡೆದ ಈ ಸಂಭ್ರಮದ ಕ್ರೀಡಾಕೂಟದಲ್ಲಿ ವಿದ್ಯರ‍್ಥಿಗಳಿಗೆ ಮತ್ತು ಪೋಷಕರಿಗೆ ವಿವಿಧ ಕ್ರೀಡಾ ಸ್ರ‍್ಧೆಗಳನ್ನು ಜರುಗಿದವು. ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷರಾದ ರೊ.ಡಾ.ರಾಮ್ ಮೋಹನ್, ಸಂಚಾಲಕರಾದ ರೊ.ಪ್ರಭಾಕರನ್ ನಾಯರ್,ರಕ್ಷಕ-ಶಿಕ್ಷಕ ಸಮಿತಿಯ ಸದಸ್ಯರು, ವಿದ್ಯಾ ಸಂಸ್ಥೆಗಳ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು ವಿಜೇತರಿಗೆ ಬಹುಮಾನವನ್ನು ವಿತರಿಸಿದರು.

ಉಪನ್ಯಾಸಕಿ ಕು.ದೀಕ್ಷಿತಾ ಮತ್ತು ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಅವರು ಕರ‍್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಎಲ್ಲಾ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ರ‍್ಗದವರು ಕ್ರೀಡಾ ಕೂಟದ ಯಶಸ್ಸಿಗೆ ಶ್ರಮಿಸಿದರು.

ಕ್ರೀಡಾ ಧ್ವಜಾವರೋಹಣದ ನಂತರ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಶೇಡಿಕಜೆ ಅವರು ಸಹಕರಿಸಿದ ರ‍್ವರಿಗೂ ಧನ್ಯವಾದಗಳನ್ನು ಸರ‍್ಪಿಸಿದರು.ರಾಷ್ಟ್ರಗೀತೆಯೊಂದಿಗೆ ಕರ‍್ಯಕ್ರಮವು ರ‍್ಥಪರ‍್ಣವಾಗಿ ಮುಕ್ತಾಯಗೊಂಡಿತು.

ಕ್ರೀಡೆ