
ಸುಳ್ಯದಿಂದ ಆಲೆಟ್ಟಿ ಕಡೆಗೆ ಸಂಚರಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಾಗಪಟ್ಟಣದಲ್ಲಿ ಚರಂಡಿಗೆ ಪಲ್ಟಿಯಾದ ಘಟನೆ ಮೇ.1 ರಂದು ನಡೆದಿದೆ.
ನಾಗಪಟ್ಟಣ ತಿರುವಿನಲ್ಲಿ ಮೋರಿ ನಿರ್ಮಾಣ ಮಾಡಿದ್ದು ತಡೆಗೋಡೆ ಕಿರಿದಾಗಿದ್ದು ಕಾರು ಚಾಲಕನ ಗಮನಕ್ಕೆ ಬಾರದೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ ಈ ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.



ತಕ್ಷಣ ಅವರಿಬ್ಬರನ್ನು ಸ್ಥಳೀಯ ಯುವಕರು 108 ಅಂಬ್ಯುಲೆನ್ಸ್ ವಾಹನದಲ್ಲಿ ಸುಳ್ಯ ಕೆ.ವಿ.ಜಿ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುವುದಾಗಿ ತಿಳಿದು ಬಂದಿದೆ. ಗಾಯ ಗೊಂಡವರು ಸಹೋದರ ಸಹೋದರಿಯವರಾಗಿದ್ದು, ಮಡಿಕೇರಿ ಮೂಲದವರು, ಇವರು ಮಿತ್ತಡ್ಕ ರೋಟರೀ ಶಾಲೆ ಬಳಿಯ ಮನೆಯ ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ ಇದೀಗ ಗಾಯಾಳುಗಳು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

