ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದು , ಸುಳ್ಯದಲ್ಲಿ ಕಾಂಗ್ರೇಸ್ ಆಡಳಿತಕ್ಕೆ ಬಂದಲ್ಲಿ ಅರಂತೋಡು ಮತ್ತು ತೊಡಿಕಾನಗಳ ರಸ್ತೆಗೆ ರೂ.20 ಕೋಟಿ ಅನುದಾನ: ಟಿ ಎಂ ಶಹೀದ್

ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದು , ಸುಳ್ಯದಲ್ಲಿ ಕಾಂಗ್ರೇಸ್ ಆಡಳಿತಕ್ಕೆ ಬಂದಲ್ಲಿ ಅರಂತೋಡು ಮತ್ತು ತೊಡಿಕಾನಗಳ ರಸ್ತೆಗೆ ರೂ.20 ಕೋಟಿ ಅನುದಾನ: ಟಿ ಎಂ ಶಹೀದ್

ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದು , ಸುಳ್ಯದಲ್ಲಿ ಕಾಂಗ್ರೇಸ್ ಆಡಳಿತಕ್ಕೆ ಬಂದಲ್ಲಿ ಅರಂತೋಡು ಮತ್ತು ತೊಡಿಕಾನ ಗ್ರಾಮ ರಸ್ತೆಗೆ ರೂ.20 ಕೋಟಿ ಅನುದಾನ ತರಿಸಿಕೊಡುವ ಗ್ಯಾರಂಟಿ ಈ ಭಾಗದವರಿಗೆ ನಾನು ಗ್ಯಾರಂಟಿ ಕೊಡುವುದಾಗಿ ಕೆ ಪಿ ಸಿ ಸಿ ಮಾಧ್ಯಮ ವಕ್ತಾರ, ಬೆಳ್ತಂಗಡಿ ಚುನಾವಣಾ ಉಸ್ತುವಾರಿಯಾಗಿರುವ ಟಿ.ಎಂ.ಶಹೀದ್ ಹೇಳಿದ್ದಾರೆ.
ಅವರು ಇಂದು ಸುಳ್ಯದಲ್ಲಿ ಪತ್ರಕರ್ತರೊಂದಿಗೆ ಮಾಧ್ಯಮ ಸಂವಾದ ನಡೆಸಿದ ಅವರು , ಸರಕಾರದ ವಿರುದ್ದ ಜನ ಬೇಸತ್ತಿದ್ದಾರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಭೂಕಂಪ, ಮಳೆ ಹಾನಿ ಸಂದರ್ಭ ಸ್ಪಂದನೆ ನೀಡದ ಸರಕಾರದ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ ರಾಜ್ಯದಾಧ್ಯಂತ ಬದಲಾವಣೆ ಬಯಸಿದ್ದಾರೆ.. ಕ್ಷೇತ್ರದಲ್ಲಿ ಕಾಂಗ್ರೆಸ್ ಮನೆ ಮನೆ ಭೇಟಿ ಮಾಡಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಳ್ಯದಲ್ಲಿ ನಮ್ಮ ಅಭ್ಯರ್ಥಿ ಗೆಲುವು ನಿಚ್ಚಳವಾಗಿದೆ ಎಂದರು.

ಗ್ರಾಮೀಣ ರಸ್ತೆಗಳ‌ ಅಭಿವೃದ್ಧಿ ಮಾಡಿಲ್ಲ. ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಈ ಬಾರಿ ಬದಲಾವಣೆ ಜನ ಬಯಸಿದ್ದಾರೆ ಜನರು ಕಾಂಗ್ರೆಸ್ ಘೋಷಣೆಗಳನ್ನು ಒಪ್ಪಿಕೊಂಡಿದ್ದಾರೆ.‌ 2013 ರಲ್ಲಿ ಸಿದ್ಧರಾಮಯ್ಯರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ 165 ಭರವಸೆಗಳಲ್ಲಿ 158 ಕೆಲಸ‌ ಕಾರ್ಯಗಳನ್ನು ಈಡೇರಿಸಿದ್ದೇವೆ. ಈ‌ ಬಾರಿಯೂ ಅದೇ ರೀತಿ ಕೆಲಸ ಆಗಲಿದೆ . ಮೊದಲ ಕ್ಯಾಬಿನೆಟ್ನಲ್ಲೇ ಗ್ಯಾರಂಟಿಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗುತ್ತದೆ. ಆ ಪ್ರಕಾರ ಈ ಜೂನ್ ತಿಂಗಳಿಂದ ಕಾಂಗ್ರೆಸ್ ಘೋಷಣೆ ಜನರಿಗೆ ತಲುಪುತ್ತದೆ ಎಂದು ಶಹೀದ್ ಹೇಳಿದರು.

ಇಂದು ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಹಬ್ಬಗಳಿಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಹೇಳಿದ್ದಾರೆ. ಮುಸ್ಲಿಂ ಹಾಗೂ ಕ್ರೈಸ್ತರ ಹಬ್ಬಗಳ ಪ್ರಸ್ತಾಪ ಮಾಡದೆ ಅಲ್ಪ ಸಂಖ್ಯಾತರಿಗೆ ಅನ್ಯಾಯ ಮಾಡಿದೆ, ಈ ರೀತಿಯ ತಾರತಮ್ಯ ಸರಿಯಲ್ಲ.

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಮುಸ್ತಫಾ ಮಾತನಾಡಿ ಎಐಸಿಸಿ ಅಧ್ಯಕ್ಷರು ಸುಳ್ಯ ಕ್ಕೆ ಬಂದು ಹೋದ ಬಳಿಕ ಹೊಸ ಸಂಚಲನ ಸೃಷ್ಟಿಯಾಗಿದೆ. ಸುಳ್ಯದ ಅಡಿಕೆ ಎಲೆ ಹಳದಿ ರೋಗ, ತಮಿಳು ಪುನರ್ವಸತಿ ದಾರರ ಬೇಡಿಕೆ, ವಿದ್ಯುತ್ ಸಹಿತ ಎಲ್ಲ ಸಮಸ್ಯೆ ಯನ್ನು ಅವರು ಅರಿತಿದ್ದಾರೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ತಕ್ಷಣ ವಿಶೇಷ ಪ್ಯಾಕೇಜ್ ತರಲಾಗುವುದು ಎಂದು ಹೇಳಿದರು.

ರಾಜ್ಯ